Select Your Language

Notifications

webdunia
webdunia
webdunia
webdunia

ಗಿಳಿಯನ್ನು ಪಂಜರದಿಂದ ಬಿಟ್ಟಿದ್ದಕ್ಕ ಬಾಲಕಿಯ ಜೀವ ತೆಗೆದ ಮಾಲೀಕ

ಗಿಳಿಯನ್ನು ಪಂಜರದಿಂದ ಬಿಟ್ಟಿದ್ದಕ್ಕ  ಬಾಲಕಿಯ ಜೀವ ತೆಗೆದ ಮಾಲೀಕ
ಪಾಕಿಸ್ತಾನ , ಶುಕ್ರವಾರ, 5 ಜೂನ್ 2020 (08:22 IST)
Normal 0 false false false EN-US X-NONE X-NONE

ಪಾಕಿಸ್ತಾನ : 8 ವರ್ಷದ ಬಾಲಕಿ ಪಂಜರದಲ್ಲಿರುವ ಗಿಳಿಯನ್ನು ಬಿಟ್ಟಿದ್ದಕ್ಕೆ ಗಿಳಿಯ ಮಾಲೀಕ ಬಾಲಕಿಯನ್ನು ಹೊಡೆದು ಕೊಂದ ಘಟನೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದಿದೆ.

 

ಮೃತ ಬಾಲಕಿಯ ಹೆಸರು ಜೊಹ್ರಾ ಎಂಬುದಾಗಿ ತಿಳಿದುಬಂದಿದೆ. ಮಾಲೀಕ ಪಕ್ಷಿಗಳನ್ನು ಸಾಕುವ ಮತ್ತು ಮಾರಾಟ ಮಾಡುವ ಕೆಲಸವನ್ನು ಮಾಡುತ್ತಿದ್ದನ್ನು. ಮನೆಮಕ್ಕಳು ನೋಡಿಕೊಳ್ಳಲು  ಜೊಹ್ರಾ ಎಂಬ 8 ವರ್ಷದ ಬಾಲಕಿಯನ್ನು ಮನೆಗಲಸಕ್ಕೆ ಇಟ್ಟುಕೊಂಡಿದ್ದನು. ಜೊಹ್ರಾ ಹಕ್ಕಿಗಳಿಗೆ ಆಹಾರ ನೀಡಲು ಪಂಜರದ ಬಾಗಿಲು ತೆಗೆದಾಗ ಅದರಲ್ಲಿ ಒಂದು ಗಿಳಿ ಹಾರಿಹೋಗಿದೆ.
 

ಇದರಿಂದ ಕೋಪಗೊಂಡ ಮಾಲೀಕ ಬಾಲಕಿಗೆ ಮನಬಂದಂತೆ ಥಳಿಸಿದ್ದಾನೆ. ಇದರಿಂದ ಬಾಲಕಿ ಪ್ರಜ್ಞೆ ತಪ್ಪಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ, ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾಳೆ. ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾಲೀಕನನ್ನು ಅರೆಸ್ಟ್ ಮಾಡಲಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮಮತೆಯ ತೊಟ್ಟಿಲಿನಲ್ಲಿ ನವಜಾತ ಹೆಣ್ಣು ಶಿಶು ಪತ್ತೆ