ಕೋವಿಡ್-19 ಕಾರ್ಯಕ್ರಮದಡಿಯಲ್ಲಿ ಇನ್‍ಫ್ಲೂಯೆಂಜಾ ಲೈಕ್ ಇಲ್‍ನೆಸ್, ತೀವ್ರ ಉಸಿರಾಟದ ತೊಂದರೆಯ ಸೋಂಕು ಮತ್ತು ಶಂಕಾಸ್ಪದ ಕೋವಿಡ್-19 ಪ್ರಕರಣಗಳ ವರದಿಗಳನ್ನು ಸಲ್ಲಿಸಬೇಕು.
ಇಂಥ ಲಕ್ಷಣಗಳು ಇರುವವರ ವರದಿಗಳನ್ನು ಸಲ್ಲಿಸದಿದ್ದರೆ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿಯನ್ನು ರದ್ದುಗೊಳಿಸಲಾಗುವುದು ಎಂದು ಚಿತ್ರದುರ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಫಾಲಾಕ್ಷ ತಿಳಿಸಿದ್ದಾರೆ.
ಕೋವಿಡ್-19 ಪ್ರಕರಣಗಳ ವರದಿಗಳನ್ನು ಆನ್‍ಲೈನ್‍ನಲ್ಲಿ ಪ್ರತಿ ದಿನ ದಾಖಲಿಸುವುದು ಅಗತ್ಯವಿರುತ್ತದೆ. ಆನ್‍ಲೈನ್‍ನಲ್ಲಿ ದಾಖಲಾತಿಯನ್ನು ಯಾವ ರೀತಿ ನೋಂದಣಿ ಮಾಡಬೇಕು ಎಂಬುದನ್ನು ಈಗಾಗಲೇ ಜಿಲ್ಲೆಯ ಎಲ್ಲ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ (ಕ್ಲಿನಿಕ್, ನರ್ಸಿಂಗ್ ಹೋಂ, ಆಸ್ಪತ್ರೆ) ತರಬೇತಿಯನ್ನು ಯುಟ್ಯೂಬ್ ಚಾನಲ್‍ನ ವಿಡಿಯೋ ಕಾನ್ಫರೆನ್ಸ್‍ನಲ್ಲಿ ತಿಳಿಸಲಾಗಿದೆ ಎಂದಿದ್ದಾರೆ.