Select Your Language

Notifications

webdunia
webdunia
webdunia
webdunia

ಕೊರೊನಾ ಕಪ್ ಗೆದ್ದ ಜಿಲ್ಲೆ ಯಾವುದು ಗೊತ್ತಾ?

ಕೊರೊನಾ ಕಪ್ ಗೆದ್ದ ಜಿಲ್ಲೆ ಯಾವುದು ಗೊತ್ತಾ?
ಚಾಮರಾಜನಗರ , ಮಂಗಳವಾರ, 26 ಮೇ 2020 (21:06 IST)
ಕೊರೊನಾ ವೈರಸ್ ತಡೆ ವಿಷಯದಲ್ಲಿ ದೇಶಕ್ಕೆ ಕೇರಳ ಮಾದರಿಯಾಗಿದ್ದರೆ, ರಾಜ್ಯಕ್ಕೆ ಈ ಜಿಲ್ಲೆ ಮಾದರಿಯಾಗಿದೆ.

ಕಳೆದ ಎರಡು ತಿಂಗಳಿಂದ ಚಾಮರಾಜನಗರದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿಲ್ಲ. ಯುದ್ದೋಪಾದಿಯಲ್ಲಿ ಅಲ್ಲಿನ ಆಡಳಿತ ಹಾಗೂ ಜನರು ಮಹಾಮಾರಿ ಕೊರೊನಾ ವಿರುದ್ಧ ಟೊಂಕಕಟ್ಟಿ ಯುದ್ಧಕ್ಕೆ ನಿಂತಿದ್ದಾರೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಅಧಿಕಾರಿಗಳ ಶ್ರಮ, ಜನರ ಸಹಕಾರದಿಂದ ಚಾಮರಾಜನಗರ ಜಿಲ್ಲೆ ಈಗಲೂ ಗ್ರೀನ್ ಝೋನ್ ನಲ್ಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಚಾಮರಾಜನಗರ-ರಾಮನಗರ ಬಗ್ಗೆ ಕಮೆಂಟ್ ಗಳು ಶುರುವಾಗಿದ್ದವು. ಇದೀಗ ರಾಮನಗರದಲ್ಲಿ ಕೊರೊನಾ ವೈರಸ್ ಕಾಣಿಸಿಕೊಳ್ಳುತ್ತಿದ್ದಂತೆ ಇತ್ತ ಚಾಮರಾಜನಗರ ಜಿಲ್ಲೆಯ ಜನರು ತಮ್ಮ ಜಿಲ್ಲೆಯ ಮುಡಿಗೆ ಕೊರೊನಾ ಕಪ್ ಬಂದಿದೆ ಎಂದು ಚರ್ಚೆ ಶುರುಮಾಡುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ರಾತ್ರಿಯೂ ಓಡಾಡಲಿವೆ ಸರಕಾರಿ ಬಸ್ ಗಳು