Select Your Language

Notifications

webdunia
webdunia
webdunia
webdunia

115 ಪೊಲೀಸ್ ರ ಕೊರೊನಾ ರಿಸಲ್ಟ್

115 ಪೊಲೀಸ್ ರ ಕೊರೊನಾ ರಿಸಲ್ಟ್
ರಾಯಚೂರು , ಸೋಮವಾರ, 1 ಜೂನ್ 2020 (19:05 IST)
ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಚೆಕ್ ಪೋಸ್ಟ್ ನಲ್ಲಿ ಹಾಗೂ ಪೊಲೀಸ್ ಠಾಣೆಗೆ ಬರುವ ಜನರನ್ನೂ ತಪಾಸಣೆಗೆ ಒಳಪಡಿಸಿ ಬಿಡಲಾಗುತ್ತಿತ್ತು.

ಆದರೂ ಕೆಲವರಲ್ಲಿ  ಕೊರೊನಾ  ಲಕ್ಷಣಗಳು ಕಂಡು ಬರದೇ ಇದ್ದರೂ ಸಹ ಕೊರೊನಾ ಸೋಂಕು ಪಾಸಿಟಿವ್ ಇರಬಹುದಾದ  ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಾದ್ಯಂತ 115 ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದೆ. ಎಲ್ಲರ ರಿಪೋರ್ಟ್ ನೆಗೆಟಿವ್ ಬಂದಿದೆ ಎಂದು ಎಸ್ ಪಿ ತಿಳಿಸಿದ್ದಾರೆ.

ಇನ್ನು ಮುಂದೆಯೂ ಹಂತ ಹಂತವಾಗಿ ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿಯ  ಗಂಟಲು  ದ್ರವ ಪರೀಕ್ಷೆಗೆ ಒಳಪಡಿಸಲಾಗುವುದು.

ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ರಕ್ಷಣೆಗೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆ ತೆಗೆದುಕೊಂಡಿದೆ ಎಂದಿದ್ದಾರೆ. 



Share this Story:

Follow Webdunia kannada

ಮುಂದಿನ ಸುದ್ದಿ

121 ಕೊರೊನಾ ಪೀಡಿತರು ಡಿಸ್ಚಾರ್ಜ್