Select Your Language

Notifications

webdunia
webdunia
webdunia
webdunia

ಮುಂಬೈ ದಾಳಿ ಸಂದರ್ಭ ಭಾರತದಲ್ಲಿದ್ದ ಪಾಕ್ ಸಚಿವರಿಗೆ ಪ್ರಣಬ್ ಮುಖರ್ಜಿ ಹೇಳಿದ್ದೇನು?

ಮುಂಬೈ ದಾಳಿ ಸಂದರ್ಭ ಭಾರತದಲ್ಲಿದ್ದ ಪಾಕ್ ಸಚಿವರಿಗೆ ಪ್ರಣಬ್ ಮುಖರ್ಜಿ ಹೇಳಿದ್ದೇನು?
ನವದೆಹಲಿ , ಭಾನುವಾರ, 15 ಅಕ್ಟೋಬರ್ 2017 (08:32 IST)
ನವದೆಹಲಿ: 2008 ರಲ್ಲಿ ಮುಂಬೈ ಮೇಲೆ ಪಾಕ್ ಮೂಲದ ಉಗ್ರರು ದಾಳಿ ನಡೆಸುವಾಗ ಭಾರತದಲ್ಲಿದ್ದ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿಗೆ ತಕ್ಷಣವೇ ಭಾರತ ಬಿಟ್ಟು ತೆರಳುವಂತೆ ಆದೇಶಿಸಿದ್ದರಂತೆ.

 
ಪ್ರಣಬ್ ಮೊನ್ನೆಯಷ್ಟೇ ಲೋಕಾರ್ಪಣೆಗೊಂಡ ತಮ್ಮ ಪುಸ್ತಕ ‘ದಿ ಕೊಯಿಲೇಷನ್ ಇಯರ್ಸ್, 1996-2012’ ರಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. ಮುಂಬೈ ಮೇಲೆ ದಾಳಿ ನಡೆದ ಮರುದಿವಸ ಪಾಕ್ ಸಚಿವ ಶಾ ಖರೇಶಿ ಮುಂಬೈಯಲ್ಲಿ ಪತ್ರಿಕಾಗೋಷ್ಟಿ ನಡೆಸಲುದ್ದೇಶಿಸಿದ್ದರಂತೆ.

ಆದರೆ ಅದನ್ನು ತಮ್ಮ ಪರಿಚಯದ ಪತ್ರಕರ್ತರ ಮೂಲಕ ತಡೆದ ಅಂದಿನ ವಿದೇಶಾಂಗ ಸಚಿವ ಪ್ರಣಬ್, ಖುರೇಶಿ ಜತೆಗೆ ಮಾತನಾಡಿ ತಕ್ಷಣವೇ ಪಾಕ್ ಗೆ ತೆರಳಲು ಆದೇಶಿಸಿದ್ದರಂತೆ. ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಹಿನ್ನಲೆಯಲ್ಲಿ ಪ್ರಣಬ್ ಹೀಗೆ ಹೇಳಿದ್ದರಂತೆ.

ಇದಕ್ಕಾಗಿ ಪಾಕ್ ಸಚಿವರಿಗೆ ತಮ್ಮದೇ ಇಲಾಖೆಯ ವಿಶೇಷ ವಿಮಾನವೊಂದನ್ನು ಸಿದ್ಧಗೊಳಿಸಿದ್ದರಂತೆ. ಆದರೆ ಅದನ್ನು ನಯವಾಗಿ ನಿರಾಕರಿಸಿದ ಪಾಕ್ ಸಚಿವ ತಮ್ಮದೇ ವಿಮಾನದಲ್ಲಿ ತವರಿಗೆ ಮರಳಿದ್ದರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೆಲ್ಮೆಟ್ ಧರಿಸದಿದ್ದೇ ಸುಂದರ ಯುವತಿ ಸಾವಿಗೆ ಕಾರಣವಾಯ್ತು