Select Your Language

Notifications

webdunia
webdunia
webdunia
webdunia

ಭಾರತದ ಗಡಿ ಬಳಿಯೇ ಅಣ್ವಸ್ತ್ರ ಅಡಗುದಾಣಗಳ ನಿರ್ಮಿಸುತ್ತಿದೆ ಪಾಕ್!

ಭಾರತದ ಗಡಿ ಬಳಿಯೇ ಅಣ್ವಸ್ತ್ರ ಅಡಗುದಾಣಗಳ ನಿರ್ಮಿಸುತ್ತಿದೆ ಪಾಕ್!
ನವದೆಹಲಿ , ಬುಧವಾರ, 11 ಅಕ್ಟೋಬರ್ 2017 (09:57 IST)
ನವದೆಹಲಿ: ಭಾರತದ ರಾಜಧಾನಿ ದೆಹಲಿ ಮತ್ತು ಪಂಜಾಬ್ ಗಡಿ ಸಮೀಪ ಸುಮಾರು 140 ಅಣ್ವಸ್ತ್ರಗಳನ್ನು ಸಂಗ್ರಹಿಸಲು ಅಡಗುದಾಣಗಳನ್ನು ಪಾಕ್ ನಿರ್ಮಿಸುತ್ತಿದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

 
ದೆಹಲಿಯಿಂದ 750 ಕಿ.ಮೀ. ದೂರದಲ್ಲಿ ಮತ್ತು ಪಂಜಾಬ್ ನ  ಅಮೃತಸರದಿಂದ ಕೇವಲ 350 ಕಿ.ಮೀ. ದೂರದಲ್ಲಿ ಪಾಕ್ ಸುರಂಗ ಕೊರೆದು ಅಣ್ವಸ್ತ್ರಗಳನ್ನು ರಹಸ್ಯವಾಗಿ ಸಂಗ್ರಹಿಸಿಡುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಅಲ್ಲದೆ ಈ ಸುರಂಗ ಮಾರ್ಗಗಳಿಗೆ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಲು ಸುಲಭವಾಗುವಂತೆ ಅಗಲವಾದ ರಸ್ತೆ ನಿರ್ಮಿಸುತ್ತಿದೆ ಎನ್ನಲಾಗಿದೆ. ಪ್ರತೀ ಅಡಗುದಾಣದಲ್ಲಿ 10 ರಿಂದ 12 ಅಣ್ವಸ್ತ್ರಗಳನ್ನು ಸಂರಕ್ಷಿಸಿಡುವ ಸಾಮರ್ಥ್ಯವಿದೆ ಎನ್ನಲಾಗಿದೆ. ಭಾರತದ ವಿರುದ್ಧ ಪದೇ ಪದೇ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ ಪಾಕ್ ನ ಈ ನಡೆ ನಿಜಕ್ಕೂ ಕಳವಳಕಾರಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಪತ್ನಿಯರ ನಡುವೆ ಜಗಳ!