Select Your Language

Notifications

webdunia
webdunia
webdunia
webdunia

ಸಂಸತ್ತಿನಲ್ಲಿ ತೇಜಸ್ವಿ-ಪ್ರಜ್ವಲ್ ರೇವಣ್ಣ ಚಕಮಕಿ

ಸಂಸತ್ತಿನಲ್ಲಿ ತೇಜಸ್ವಿ-ಪ್ರಜ್ವಲ್ ರೇವಣ್ಣ ಚಕಮಕಿ
ನವದೆಹಲಿ , ಬುಧವಾರ, 26 ಜೂನ್ 2019 (11:22 IST)
ನವದೆಹಲಿ: ಲೋಕಸಭೆ ಚುನಾವಣೆ ನೂತನವಾಗಿ ಆಯ್ಕೆಯಾದ ಪ್ರಜ್ವಲ್ ರೇವಣ್ಣ ಮತ್ತು ತೇಜಸ್ವಿ ಸೂರ್ಯ ನಿನ್ನೆ ಸಂಸತ್ ಕಲಾಪದಲ್ಲಿ ಪರಸ್ಪರ ವಾಗ್ಬಾಣ ನಡೆಸಿದ್ದಾರೆ.


ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ವೇಳೆ ಈ ಇಬ್ಬರೂ ಯುವ ಸಂಸದರಿಗೆ ಮಾತನಾಡಲು ಅವಕಾಶ ನೀಡಲಾಯಿತು. ಈ ವೇಳೆ ತೇಜಸ್ವಿ ಸೂರ್ಯ ಐಎಂಎ ಹಗರಣದ ಬಗ್ಗೆ ಪ್ರಸ್ತಾಪಿಸಿ ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು.

ಇದಕ್ಕೆ ತಿರುಗೇಟು ಕೊಟ್ಟ ಪ್ರಜ್ವಲ್ ರೇವಣ್ಣ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ. ನನ್ನ ಸಹೋದರ ಸಂಸದ ಈ ಬಗ್ಗೆ ಸಂಸತ್ತನ್ನು ತಪ್ಪುದಾರಿಗೆಳೆಯುತ್ತಿದ್ದಾರೆ ಎಂದರು. ಅಷ್ಟೇ ಅಲ್ಲದೆ, ಮಂಡ್ಯ ರೈತರ ನೀರಿನ ಸಮಸ್ಯೆ ಪರಿಹರಿಸಲು ಪಕ್ಷಬೇಧ ಮರೆತು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದೂ ಅವರು ಮನವಿ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ತೋಟದಲ್ಲಿ 15 ಅಡಿ ಉದ್ದದ ಕಿಂಗ್ ಕೋಬ್ರಾ ಪತ್ತೆ