Select Your Language

Notifications

webdunia
webdunia
webdunia
Wednesday, 9 April 2025
webdunia

ಸಂಸತ್ ನ ಮೊದಲ ಅಧಿವೇಶನಕ್ಕೆ ಗೈರು ಹಾಜರಾದ ಸಂಸದ ಪ್ರಜ್ವಲ್ ರೇವಣ್ಣ

ಬೆಂಗಳೂರು
ಬೆಂಗಳೂರು , ಸೋಮವಾರ, 17 ಜೂನ್ 2019 (12:13 IST)
ಬೆಂಗಳೂರು : ಇಂದಿನಿಂದ ಆರಂಭವಾದ ಸಂಸತ್ ನ ಮೊದಲ ಅಧಿವೇಶನಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಗೈರು ಹಾಜರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.



ಇಂದಿನಿಂದ ಜುಲೈ 26ರವರೆಗೆ ಒಟ್ಟು 40 ದಿನಗಳ ಕಾಲ ನಡೆಯುವ ಅಧಿವೇಶನ ನಡೆಯಲಿದ್ದು, ಈಗಾಗಲೇ ಪ್ರಧಾನಿ ಮೋದಿ ಸಂಸತ್ ಅಧಿವೇಶನ ಸುಗಮವಾಗಿ ನಡೆಸಲು ಪ್ರತಿಪಕ್ಷಗಳು ಸಹಕರಿಸುವಂತೆ ಮನವಿ ಮಾಡಿದ್ದಾರೆ.  ಆದರೆ ಸಂಸದ ಪ್ರಜ್ವಲ್ ರೇವಣ್ಣ ಮೊದಲ ದಿನವೇ ಗೈರು ಹಾಜರಾಗಿದ್ದಾರೆ.

 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಜ್ವಲ್ ರೇವಣ್ಣ, ಅನಾರೋಗ್ಯದ ಕಾರಣದಿಂದ ಅಧಿವೇಶನಕ್ಕೆ ಬರಲು ಆಗಿಲ್ಲ. ಜೂನ್ 19ರಂದು ಕಲಾಪಕ್ಕೆ ಹಾಜರಾಗುತ್ತೇನೆ. ನಿಮ್ಮ ಸಲಹೆ, ಮಾರ್ಗದರ್ಶನ ನನಗೆ ಅಗತ್ಯ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ ಎನ್ನಲಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ನಡೆಯುವ ಮೊದಲ ಅಧಿವೇಶನದಲ್ಲಿ ನೂತನ ಸಂಸದರಿಂದ ಪ್ರಮಾಣವಚನ ಸ್ವೀಕಾರ