Publish Date: Tue, 18 Jun 2019 (16:08 IST)
Updated Date: Tue, 18 Jun 2019 (16:10 IST)
ಸಂಸದ ಪ್ರಜ್ವಲ್ ರೇವಣ್ಣ ಮತ್ತು ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಸದ್ಯ ತೆರೆಮರೆಯಲ್ಲಿಯೇ ಇರಬೇಕು. ಹೀಗಂತ ಜೆಡಿಎಸ್ ಮಾಜಿ ಶಾಸಕ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಹೇಳಿದ್ದಾರೆ.
ನಿಖಿಲ್ ಹಾಗೂ ಪ್ರಜ್ವಲ್ ಸದ್ಯ ತೆರೆ ಮರೆಯಲ್ಲಿ ಇರೋದು ಸೂಕ್ತ. ಹೀಗಂತ ನೇರವಾಗಿ ಹೇಳಿದ್ದಾರೆ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ ಎಸ್ ವಿ ದತ್ತ.
ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ಸ್ಥಾನದಿಂದ ಅವರು ದೂರ ಇರೋದು ಉತ್ತಮ. ಈಗಾಗಲೇ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಇಬ್ಬರೂ ಪ್ರಜ್ವಲಿಸುತ್ತಾ ಇದ್ದಾರೆ. ಬೇರೆಯವರಿಗೆ ಅವಕಾಶ ಮಾಡಿಕೊಡಲಿ ಎಂದು ಹೇಳಿದ್ದಾರೆ ದತ್ತಾ.
ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಹೆಚ್.ವಿಶ್ವನಾಥ್ ಅವರೇ ಮುಂದುವರೆಯೋದು ಉತ್ತಮ. ಈಗಾಗಲೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಹೆಚ್.
ವಿಶ್ವನಾಥ್ ಅವರ ಮಾರ್ಗದರ್ಶನ ದಲ್ಲಿ ನಾವು ಮುನ್ನಡೆಯುತ್ತೇವೆ ಎಂದರು.