Publish Date: Tue, 18 Jun 2019 (15:56 IST)
Updated Date: Tue, 18 Jun 2019 (15:59 IST)
ಐಎಂಎ ವಂಚಕರಿಗೆ ಇಡಿ ನೋಟಿಸ್ ಜಾರಿ ಮಾಡಿದೆ.
ಐಎಂಎ ಹಗರಣ ಕುರಿತು ದೂರು ದಾಖಲಾದ ಬೆನ್ನಲ್ಲೆ ನೋಟಿಸ್ ನೀಡಿದೆ ಇಡಿ. ಐಎಂಎ ಮಾಲೀಕ ಮನ್ಸೂರ್ ಖಾನ್ ಹಾಗೂ ಏಳು ಜನರಿಗೆ ನೋಟಿಸ್ ಇಡಿ ಇಂದ ನೋಟಿಸ್ ಜಾರಿಗೊಳಿಸಲಾಗಿದೆ.
ಐಎಂಎ ಜ್ಯುವೆಲ್ಲರಿ, ಮಾಲೀಕ ಮನ್ಸೂರ್ ಖಾನ್ ಹಾಗೂ ಏಳು ಜನರ ವಿರುದ್ಧ ದೂರು ದಾಖಲಿಸಿದೆ ಇಡಿ.
ಕಳೆದ ಶನಿವಾರ ಸಂಜೆ ಇಸಿಐಆರ್ ದಾಖಲಿಸಿತ್ತು ಇಡಿ. ಇಸಿಐಆರ್ ದಾಖಲು ಬಳಿಕ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಐಎಂಎಯಲ್ಲಿ ವಿದೇಶಿ ಹೂಡಿಕೆ, ವಿದೇಶಿ ವಿನಿಮಯ, ವಿದೇಶಿ ವಹಿವಾಟು ನಡೆಸಿದ ಆರೋಪ ಕೇಳಿಬಂದಿದೆ. FEMA ಮತ್ತು PMLA ಕಾಯ್ದೆ ಉಲ್ಲಂಘನೆ ಮಾಡಿ ಹೂಡಿಕೆ ಮಾಡಲಾಗಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಇಡಿ ದೂರು ದಾಖಲಿಸಿದೆ.
ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕೆಲವು ಮಾಹಿತಿ ಸಂಗ್ರಹಿಸಿದ ಇಡಿ ಆಧಿಕಾರಿಗಳು, ಬಳಿಕ ಪ್ರಕರಣದ ಎಲ್ಲಾ ಆರೋಪಗಳಿಗೆ ನೋಟಿಸ್ ಜಾರಿಮಾಡಿದ್ದಾರೆ. ಇದೇ ವೇಳೆ ಎಸ್ಐಟಿಯಿಂದಲೂ ಪ್ರಕರಣದ ಮಾಹಿತಿ ಕಲೆ ಹಾಕಲು ಇಡಿ ಮುಂದಾಗಿದೆ.