Publish Date: Wed, 17 Jan 2024 (08:58 IST)
Updated Date: Wed, 17 Jan 2024 (08:59 IST)
ತ್ರಿಶ್ಶೂರ್: ಇಂದು ಬೆಳ್ಳಂ ಬೆಳಿಗ್ಗೆಯೇ ಪ್ರಧಾನಿ ಮೋದಿ ಕೇರಳದ ಪ್ರಸಿದ್ಧ ಗುರುವಾಯೂರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ನಿನ್ನೆಯಿಂದ ಪ್ರಧಾನಿ ಮೋದಿ ಕೇರಳ ಪ್ರವಾಸದಲ್ಲಿದ್ದಾರೆ. ನಿನ್ನೆ ಸಂಜೆ ಕೊಚ್ಚಿಯಲ್ಲಿ ರೋಡ್ ಶೋ ನಡೆಸಿದ್ದರು. ಈ ವೇಳೆ ಅವರಿಗೆ ಹೂಮಳೆಯ ಸ್ವಾಗತ ಸಿಕ್ಕಿದೆ.
ಇಂದು ಬೆಳಿಗ್ಗೆಯೇ ಗುರುವಾಯೂರು ದೇವಾಲಯಕ್ಕೆ ಪಂಚೆ ಉಟ್ಟು, ಮೇಲ್ವಸ್ತ್ರ ಹಾಕಿಕೊಂಡು ಸಾಂಪ್ರದಾಯಿಕವಾಗಿ ಭೇಟಿ ನೀಡಿದ ಪ್ರಧಾನಿ ಮೋದಿ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ನಮನ ಸಲ್ಲಿಸಿದ್ದಾರೆ. ಇಲ್ಲಿ ತುಲಾಭಾರ ಸೇವೆ ಮತ್ತು ವಿಶೇಷ ಪೂಜೆ ನೆರವೇರಿಸಿದ್ದಾರೆ. ಪ್ರಧಾನಿ ಭೇಟಿ ಹಿನ್ನಲೆಯಲ್ಲಿ ದೇವಾಲಯಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.
ಇಂದು ಇಲ್ಲಿ ಬಿಜೆಪಿ ನಾಯಕ, ನಟ ಸುರೇಶ್ ಗೋಪಿ ಮಗಳ ವಿವಾಹ ಕಾರ್ಯಕ್ರಮವಿದ್ದು, ಇದರಲ್ಲೂ ಮೋದಿ ಭಾಗಿಯಾಗುತ್ತಿದ್ದಾರೆ. ಈಗಾಗಲೇ ಮದುವೆ ಕಾರ್ಯಕ್ರಮಗಳು ಆರಂಭವಾಗಿದೆ.