Select Your Language

Notifications

webdunia
webdunia
webdunia
webdunia

ಸಂಕ್ರಾಂತಿ ದಿನ ಗೋವುಗಳ ಜೊತೆ ಕಾಲ ಕಳೆದ ಪ್ರಧಾನಿ ಮೋದಿ

PM Modi

Krishnaveni K

ನವದೆಹಲಿ , ಸೋಮವಾರ, 15 ಜನವರಿ 2024 (15:01 IST)
Photo Courtesy: Twitter
ನವದೆಹಲಿ: ಇಂದು ದೇಶದಾದ್ಯಂತ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ಮೋದಿ ಕೂಡಾ ತಮ್ಮ ನಿವಾಸದಲ್ಲಿ ಹಬ್ಬ ಆಚರಿಸಿದ್ದಾರೆ.

ಸಂಕ್ರಾಂತಿ ಹಬ್ಬದ ನಿಮಿತ್ತ ಮೋದಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಜನತೆಗೆ ಶುಭಾಶಯ ತಿಳಿಸಿದ್ದರು. ದೆಹಲಿಯಲ್ಲಿ ನಡೆದ ಪೊಂಗಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇಂದು ಮೋದಿ ತಮ್ಮ ನಿವಾಸದಲ್ಲಿ ಗೋವುಗಳ ಜೊತೆ ಹಬ್ಬದ ಸಂಭ್ರಮಾಚರಿಸಿದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಪುಂಗನೂರು ತಳಿಯ ಹಸುಗಳ ಹಿಂಡಿನ ಜೊತೆ ಮೋದಿ ಕಾಲ ಕಳೆದಿದ್ದಾರೆ. ಹಸುಗಳಿಗೆ ಮೇವು ಹಾಕಿ, ಅವುಗಳನ್ನು ಪ್ರೀತಿಯಿಂದ ಮೈದಡವಿ ಖುಷಿಪಟ್ಟಿದ್ದಾರೆ.

ಸಂಕ್ರಾಂತಿ ನಿಮಿತ್ತ ಎತ್ತುಗಳಿಗೆ ಅಲಂಕಾರ ಮಾಡಿ ಕಿಚ್ಚು ಹಾಯಿಸುವ ಸಂಪ್ರದಾಯ ಕರ್ನಾಟಕದಲ್ಲಿದೆ. ಕೆಲವು ಕಡೆಗೆ ಗೋವುಗಳಿಗೂ ಪೂಜೆ ಮಾಡುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಬರುವ ವಿಐಪಿಗಳಿಗೆ ಸಿಗಲಿದೆ ವಿಶೇಷ ಉಡುಗೊರೆ