Select Your Language

Notifications

webdunia
webdunia
webdunia
webdunia

ಪ್ರಧಾನಿಗೆ ಅವಹೇಳನ ಮಾಡಿದ್ದಕ್ಕೆ ಮಾಲ್ಡೀವ್ಸ್ ಪ್ರವಾಸವನ್ನೇ ರದ್ದು ಮಾಡಿದ ನಟ ಅಕ್ಕಿನೇನಿ ನಾಗಾರ್ಜುನ

Nagarjuna Akkineni

Krishnaveni K

ಹೈದರಾಬಾದ್ , ಸೋಮವಾರ, 15 ಜನವರಿ 2024 (07:30 IST)
ಹೈದರಾಬಾದ್: ಪ್ರಧಾನಿ ಮೋದಿಗೆ ಅವಹೇಳನ ಮಾಡಿದ್ದ ಮಾಲ್ಡೀವ್ಸ್ ವಿರುದ್ಧ ಬಹಿಷ್ಕಾರಕ್ಕೆ ಅಭಿಯಾನಕ್ಕೆ ತೆಲುಗು ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಕೈ ಜೋಡಿಸಿದ್ದಾರೆ.

ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿ ಬಗ್ಗೆ ಕುಹುಕವಾಡಿದ್ದ ಮಾಲ್ಡೀವ್ಸ್ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಅನೇಕ ಸೆಲೆಬ್ರಿಟಿಗಳು ಕಿಡಿ ಕಾರಿದ್ದರು. ಅಲ್ಲದೆ, ಮಾಲ್ಡೀವ್ಸ್ ಬಹಿಷ್ಕಾರ ಅಭಿಯಾನವನ್ನು ಬೆಂಬಲಿಸಿದ್ದರು.

ಇದೀಗ ತೆಲುಗು ನಟ ನಾಗಾರ್ಜುನ ಜನವರಿ 17 ಕ್ಕೆ ಕುಟುಂಬ ಸಮೇತ ಮಾಲ್ಡೀವ್ಸ್ ಪ್ರವಾಸಕ್ಕೆ ಯೋಜನೆ ಹಾಕಿಕೊಂಡಿದ್ದರು. ಆದರೆ ನಮ್ಮ ಪ್ರಧಾನಿ ಬಗ್ಗೆ ಅವಹೇಳನ ಮಾಡಿದ ಮಾಲ್ಡೀವ್ಸ್ ಪ್ರವಾಸವನ್ನು ರದ್ದು ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.

‘ಜನವರಿ 17 ರಂದು ಮಾಲ್ಡೀವ್ಸ್ ಗೆ ಹೋಗಬೇಕಿತ್ತು. ಆದರೆ ನಮ್ಮ ಪ್ರಧಾನಿ ಮೋದಿಯವರ ವಿರುದ್ಧ ಕೀಳು ಅಭಿರುಚಿಯ ಪೋಸ್ಟ್ ಗಳನ್ನು ನೋಡಿದ ಮೇಲೆ ಮನಸ್ಸು ಬದಲಾಯಿಸಿದೆ. ಕೆಟ್ಟ ಪೋಸ್ಟ್ ಗಳಿಗೆ ಅವರು ಬೆಲೆ ತೆರಲಿದ್ದಾರೆ. ಪ್ರಧಾನಿ ಮೋದಿ 1.5 ಶತಕೋಟಿ ಜನರ ನಾಯಕ ಮತ್ತು ಪ್ರಪಂಚದಾದ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ’ ಎಂದು ನಾಗಾರ್ಜುನ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಕ್ರಾಂತಿಯನ್ನು ಕಡೆಗಣಿಸಿತೇ ಕನ್ನಡ ಚಿತ್ರರಂಗ?