Publish Date: Mon, 15 Jan 2024 (08:32 IST)
Updated Date: Mon, 15 Jan 2024 (08:33 IST)
ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ನಿಮಿತ್ತ 11 ದಿನಗಳ ಕಾಲ ದೇವಾಲಯ ಶುದ್ಧಿಗೊಳಿಸಲು ಪ್ರಧಾನಿ ಮೋದಿ ಕರೆ ಕೊಟ್ಟಿದ್ದರು.
ಅದರಂತೆ ಬಿಜೆಪಿ ನಾಯಕ, ನಟ ಜಗ್ಗೇಶ್ ತಮ್ಮ ಊರಿನ ದೇವಾಲಯ ಸ್ವಚ್ಛಗೊಳಿಸುವ ಮೂಲಕ ಪ್ರಧಾನಿ ಕರೆಯನ್ನು ಪಾಲಿಸಿದ್ದಾರೆ. ತಮ್ಮೂರಿನ ಕಾಲಭೈರವೇಶ್ವರ ದೇವಾಲಯದ ಆವರಣವನ್ನು ನೀರು ಹಾಕಿ ಗುಡಿಸಿ, ಸಾರಿಸಿ ಸ್ವಚ್ಛಗೊಳಿಸಿದ ಜಗ್ಗೇಶ್ ಪೂಜೆ ಸಲ್ಲಿಸಿದ್ದಾರೆ.
ಹೆಮ್ಮೆಯ ಪ್ರಧಾನಿ ಮೋದಿ ಜಿಯವರ ಪ್ರೀತಿಯ ಬೇಡಿಕೆಯಂತೆ ಇಂದು ನನ್ನ ಗ್ರಾಮದ ಕಾಲಭೈರವೇಶ್ವರ ಆಲಯ ಸ್ವಚ್ಛಗೊಳಿಸುವ ಕಾರ್ಯ ಆಂತರ್ಯ ಭಕ್ತಿಯಿಂದ ಮಾಡಿದೆ. 560 ವರ್ಷದ ಹೋರಾಟದ ಫಲಶೃತಿ. ಶ್ರೀರಾಮ ಪ್ರತಿಷ್ಠಾಪನೆ ಆಗುತ್ತಿರುವ. ಇನ್ನಾದರೂ ದೇಶದ ಪ್ರತಿ ಪ್ರಜೆಯ ಹೃದಯದಲ್ಲಿ ಶ್ರೀರಾಮ ಸ್ಥಾಪಿತವಾಗಲಿ ಎಂದಿದ್ದಾರೆ ಜಗ್ಗೇಶ್.
ಶ್ರೀರಾಮ ಮಂದಿರ ಲೋಕಾರ್ಪಣೆ ನಿಮಿತ್ತ ಪ್ರಧಾನಿ ಮೋದಿ ಮೊನ್ನೆಯಿಂದ 11 ದಿನಗಳ ಅನುಷ್ಠಾನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದದಾರೆ. ಅದರಂತೆ ಸ್ವತಃ ತಾವೇ ದೇವಾಲಯ ಸ್ವಚ್ಛಗೊಳಿಸಿ ಮಾದರಿಯಾಗಿದ್ದರು.