Publish Date: Mon, 15 Jan 2024 (08:36 IST)
Updated Date: Mon, 15 Jan 2024 (08:40 IST)
ಅಯೋಧ್ಯೆ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಬರುವ ಗಣ್ಯ ಅತಿಥಿಗಳಿಗೆ ವಿಶೇಷ ಉಡುಗೊರೆ ನೀಡಲು ರಾಮಜನ್ಮಭೂಮಿ ಟ್ರಸ್ಟ್ ತೀರ್ಮಾನಿಸಿದೆ.
ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಈಗಾಗಲೇ ರಾಮಜನ್ಮಭೂಮಿ ಟ್ರಸ್ಟ್ ಖುದ್ದಾಗಿ ಮನೆಗೆ ತೆರಳಿ ಆಹ್ವಾನ ನೀಡಿದೆ.
ಇವರಲ್ಲಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಉದ್ಯಮಿ ಮುಕೇಶ್ ಅಂಬಾನಿ, ಅದಾನಿ, ರತನ್ ಟಾಟಾ, ನಟ ರಜನೀಕಾಂತ್, ಮೋಹನ್ ಲಾಲ್, ರಿಷಬ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಸೇರಿದ್ದಾರೆ.
ಇದೀಗ ಉದ್ಘಾಟನೆ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಅತಿಥಿಗಳಿಗೆ ಅಯೋಧ್ಯೆ ಉತ್ಖನನ ಸಮಯದಲ್ಲಿ ಸಿಕ್ಕಿದ್ದ ಮಣ್ಣು ಮತ್ತು ದೇಸೀ ತುಪ್ಪದಿಂದ ತಯಾರಿಸಿ ಮೋತಿಚೂರು ಲಡ್ಡು ಪ್ರಸಾದ ರೂಪದಲ್ಲಿ ನೀಡಲು ರಾಮಜನ್ಮಭೂಮಿ ಟ್ರಸ್ಟ್ ತಯಾರಿ ನಡೆಸಿದೆ. ಇದನ್ನು ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿ ನೀಡಲಾಗುವುದು.