Publish Date: Mon, 13 Aug 2018 (09:16 IST)
Updated Date: Mon, 13 Aug 2018 (09:19 IST)
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಕೂಟಕ್ಕೆ ಪ್ರಬಲ ಪ್ರತಿಸ್ಪರ್ಧಿಯಾಗಲು ವಿಪಕ್ಷಗಳು ಮಾಡಿರುವ ಮಹಾಘಟಬಂಧನ್ ಬಗ್ಗೆ ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.
ಮಹಾಘಟಬಂಧನ್ ರಾಜಕೀಯ ಅವಕಾಶವಾದಿತ್ವ ಮತ್ತು ಇದು ವರ್ತಮಾನ ಭವಿಷ್ಯಗಳಲ್ಲೆರಡರಲ್ಲೂ ಸೋಲು ಕಾಣುವುದು ನಿಶ್ಚಿತ ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದ್ದಾರೆ.
ವಿಪಕ್ಷಗಳು ಸೋಲಿನ ಭೀತಿಯಿಂದ ಮಹಾಘಟಬಂಧನ್ ರಚಿಸಿಕೊಂಡಿವೆ. ಇದರಲ್ಲಿ ಜನ ಸಾಮಾನ್ಯರಿಗೆ ಒಳ್ಳೆದು ಮಾಡುವ ಯಾವುದೇ ಉದ್ದೇಶವೂ ಇಲ್ಲ. ತಮ್ಮ ಸ್ವಾರ್ಥಕ್ಕಾಗಿ, ಅಧಿಕಾರಕ್ಕಾಗಿ ಮಹಾಘಟಬಂಧನ್ ರೂಪಿಸಿಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.