Select Your Language

Notifications

webdunia
webdunia
webdunia
webdunia

ಮತ್ತೆ ಕಣ್ಣು ಹೊಡೆದ ರಾಹುಲ್ ಗಾಂಧಿ! ಈ ಬಾರಿ ಎಲ್ಲಿ ಗೊತ್ತಾ?!

ರಾಹುಲ್ ಗಾಂಧಿ
ನವದೆಹಲಿ: ಸಂಸತ್ ಕಲಾಪದ ವೇಳೆ ಪ್ರಧಾನಿ ಮೋದಿಯನ್ನು ತಬ್ಬಿಕೊಂಡು ಬಳಿಕ ಕಣ್ಸನ್ನೆ ಮಾಡಿ ಸುದ್ದಿಯಾಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಅದೇ ಕೆಲಸ ಮಾಡಿದ್ದಾರೆ.

ಆದರೆ ಈ ಬಾರಿ ಅವರು ಕಣ್ಸನ್ನೆ ಮಾಡಿ ಸುದ್ದಿಯಾಗಿದ್ದು ರಾಜಸ್ಥಾನದ ಚುನಾವಣಾ ಸಮಾವೇಶವೊಂದರಲ್ಲಿ. ರ್ಯಾಲಿ ಸಂದರ್ಭದಲ್ಲಿ ಕಣ್ಸನ್ನೆ ಮಾಡಿದ ಬಳಿಕ ರಾಜಸ್ಥಾನದ ಕಾಂಗ್ರೆಸ್ ಅಧ‍್ಯಕ್ಷ ಸಚಿನ್ ಪೈಲಟ್ ರನ್ನು ರಾಹುಲ್ ತಬ್ಬಿಕೊಂಡಿದ್ದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ.

 ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಸಂದರ್ಭ ರಾಹುಲ್ ಗಾಂಧಿ ತಮ್ಮ ಭಾಷಣದ ನಡುವೆ ಎದ್ದು ಹೋಗಿ ಪ್ರಧಾನಿ ಮೋದಿಯವರನ್ನು ತಬ್ಬಿಕೊಂಡು ಬಳಿಕ ತಮ್ಮ ಪಕ್ಷದ ನಾಯಕರತ್ತ ನೋಡಿ ಕಣ್ಸನ್ನೆ ಮಾಡಿದ್ದು ಭಾರೀ ವೈರಲ್ ಆಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ದ.ಕ. ಜಿಲ್ಲೆಯ ಶಾಲಾ ಮಕ್ಕಳಿಗೆ ರಜವೋ ರಜ