Publish Date: Wed, 22 Nov 2017 (09:38 IST)
Updated Date: Wed, 22 Nov 2017 (09:40 IST)
ನವದೆಹಲಿ: ಪ್ರಧಾನಿ ಮೋದಿ ಎಂದರೆ ಸಾಕ್ಷಾತ್ ಬ್ರಹ್ಮನಿದ್ದಂತೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಸೃಷ್ಟಿಕರ್ತನ ಬ್ರಹ್ಮನಂತೆ ಎಲ್ಲಾ ನಿಯಂತ್ರಣವೂ ಅವರ ಕೈಯಲ್ಲೇ. ಚಳಿಗಾಲದ ಅಧಿವೇಶನ ಯಾವಾಗ ನಡೆಯುತ್ತದೆ ಎನ್ನುವುದು ಅವರಿಗೆ ಮಾತ್ರ ಗೊತ್ತು. ನಾನೂ ಹಲವು ಸಚಿವರು, ಸ್ಪೀಕರ್ ಕೇಳಿದೆ. ಆದರೆ ಯಾರಿಗೂ ಅಧಿವೇಶನ ಯಾವಾಗ ಎಂದು ಗೊತ್ತಿಲ್ಲ’ ಎಂದು ಖರ್ಗೆ ಟೀಕಿಸಿದ್ದಾರೆ.
ಹೀಗಾಗಿ ಪ್ರಧಾನಿ ಮೋದಿ ಬ್ರಹ್ಮನಿದ್ದನಂತೆ. ಬ್ರಹ್ಮನ ಆದೇಶ ಬರುವವರೆಗೂ ಏನೂ ನಡೆಯಲ್ಲ. ಯಾವಾಗ ಏನಾಗುತ್ತದೆಂದು ಅವರಿಗೆ ಮಾತ್ರ ಗೊತ್ತು ಎಂದು ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ