Publish Date: Mon, 20 Nov 2017 (09:11 IST)
Updated Date: Mon, 20 Nov 2017 (09:12 IST)
ನವದೆಹಲಿ: ಹಗರಣ ಮುಕ್ತ ಸರ್ಕಾರ ಎಂದು ಬೀಗುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೂ ಒಂದಲ್ಲಾ ಒಂದು ದಿನ ಹಗರಣಗಳ ಬಿಸಿ ತಟ್ಟದೇ ಇರಲ್ಲ ಎಂದು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಹೇಳಿದ್ದಾರೆ.
‘ಹಿಂದೆ ಯುಪಿಎ 2 ಅಧಿಕಾರವಧಿ ಆರಂಭದಲ್ಲಿ ಯಾವುದೇ ಹಗರಣಗಳ ಕಳಂಕವಿರಲಿಲ್ಲ. ಆದರೆ ಅಧಿಕಾರಾವಧಿ ಮುಗಿಯುತ್ತಾ ಬಂದಂತೆ ಒಂದೊಂದೇ ಹಗರಣಗಳ ಕಳಂಕ ಮುಟ್ಟಿತು. ಇದೀಗ ಮೋದಿ ಸರ್ಕಾರದ ಕತೆಯೂ ಅಷ್ಟೇ’ ಎಂದು ಚಿದಂಬರಂ ಎಚ್ಚರಿಸಿದ್ದಾರೆ.
ಎಷ್ಟೇ ಜನಪ್ರಿಯತೆಯಲ್ಲಿದ್ದರೂ ಅಧಿಕಾರಾವಧಿ ಕೊನೆಗೊಳ್ಳುವಾಗ ಕಳಂಕ ಬಂದೇ ಬರುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ