Publish Date: Wed, 22 Nov 2017 (09:23 IST)
Updated Date: Wed, 22 Nov 2017 (09:25 IST)
ಬೆಂಗಳೂರು: ರಾಹುಲ್ ಗಾಂಧಿ ಕಾಶಿ ವಿಶ್ವನಾಥ ದೇವಾಲಯದಲ್ಲಿ ಪ್ರಾರ್ಥನೆಗೆ ಕೂರಲು ಗೊತ್ತಿರಲಿಲ್ಲ ಎಂದು ಟೀಕಿಸಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ವಿರುದ್ಧ ನಟಿ, ಮಾಜಿ ಸಂಸದೆ ರಮ್ಯಾ ವ್ಯಂಗ್ಯವಾಡಿದ್ದಾರೆ.
ಕಾಶಿ ವಿಶ್ವನಾಥ ದೇವಾಲಯಕ್ಕೆ ಬಂದಿದ್ದಾಗ ರಾಹುಲ್ ಗೆ ದೇವರ ಪ್ರಾರ್ಥನೆಗೆ ಹೇಗೆ ಕೂರಬೇಕೆಂದೇ ಗೊತ್ತಿರಲಿಲ್ಲ. ಕೊನೆಗೆ ಅರ್ಚಕರು ಇದು ದೇವಾಲಯ ಮಸೀದಿ ಅಲ್ಲ. ನಮಾಜ್ ಗೆ ಕೂರುವಂತೆ ಕೂರಬೇಡಿ ಎಂದು ಹೇಳಬೇಕಾಯಿತು ಎಂದು ಸಿಎಂ ಯೋಗಿ ಕಾಲೆಳೆದಿದ್ದರು.
ಇದಕ್ಕೆ ಉತ್ತರವಾಗಿ ಟ್ವೀಟ್ ಮಾಡಿರುವ ರಮ್ಯಾ ‘ಮತ್ತೆ ದೇವರು ಹೇಳಿದ್ರು ಯೋಗಿ ಆದಿತ್ಯನಾಥ್ ಸುಳ್ಳುಗಾರ ಎಂದು’ ಎಂದಿದ್ದಾರೆ. ಇದಕ್ಕೆ ಬಿಜೆಪಿಯಿಂದ ಆಕ್ಷೇಪ ವ್ಯಕ್ತವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ