Publish Date: Tue, 21 Nov 2017 (15:06 IST)
Updated Date: Tue, 21 Nov 2017 (15:07 IST)
ಪ್ರಧಾನಿ ಮೋದಿ ವಿರುದ್ಧ ಯಾರಾದರೂ ಕೈ ತೋರಿಸಿದಲ್ಲಿ ಅವರ ಕೈಗಳನ್ನು ಕತ್ತರಿಸಿಹಾಕುತ್ತೇವೆ ಎಂದು ಬಿಜೆಪಿ ಸಂಸದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಹಾರ್‌ನ ಉಜಿಯಾಪುರ್ ಲೋಕಸಭಾ ಕ್ಷೇತ್ರದ ಸಂಸದರಾದ ನಿತ್ಯಾನಂದ್ ರಾಯ್, ಪ್ರಧಾನಿ ಮೋದಿ ದೇಶವನ್ನು ಅಭಿವೃದ್ಧಿಯತ್ತ ಪಥದತ್ತ ಸಾಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಕಾರ್ಯಕ್ಕೆ ಅಡ್ಡಿಯಾದಲ್ಲಿ ತಕ್ಕ ಶಿಕ್ಷೆ ವಿಧಿಸುತ್ತೇವೆ ಎಂದು ಗುಡುಗಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಯಾರೇ ಮಾತನಾಡಿದ್ರೂ ಅಥವಾ ಬೆರಳು ತೋರಿಸಿದರೂ ಅವರ ಬೆರಳುಗಳನ್ನು ಕತ್ತರಿಸಿ ಹಾಕುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
ಅವರ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ, ದೇಶದ ಗೌರವ ಮತ್ತು ಸುರಕ್ಷತೆಯ ವಿರುದ್ಧ ಧ್ವನಿ ಎತ್ತುವವರ ಬಗ್ಗೆ ಹೇಳಿದ್ದೇನೆ ಎಂದು ಉಲ್ಟಾ ಹೊಡೆದಿದ್ದಾರೆ.
2016ರಲ್ಲಿ ನಿತ್ಯಾನಂದರನ್ನು ಬಿಹಾರನ ಬಿಜೆಪಿ ರಾಜ್ಯಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳನ್ನು ಜಾರಿಗೆ ತರುವುದೇ ನಮ್ಮ ಗುರಿಯಾಗಿದೆ ಎಂದು ಬಿಹಾರ್ ಬಿಜೆಪಿ ರಾಜ್ಯಾಧ್ಯಕ್ಷ ನಿತ್ಯಾನಂದ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.