Select Your Language

Notifications

webdunia
webdunia
webdunia
webdunia

ಮಾನುಷಿ ವಿಶ್ವಸುಂದರಿ ಸ್ಪರ್ಧೆ ಗೆದ್ದಿದ್ದೂ ಪ್ರಧಾನಿ ಮೋದಿಯಂತೆ!

ಮಾನುಷಿ ಚಿಲ್ಲರ್
ನವದೆಹಲಿ: ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಮಿತ್ರ ಪಕ್ಷ ಶಿವಸೇನೆ, ಇತ್ತೀಚೆಗೆ ವಿಶ್ವ ಸುಂದರಿ ಸ್ಪರ್ಧೆ ವಿಜೇತೆಯಾಗಿದ್ದ ಮಾನುಷಿ ಚಿಲ್ಲರ್ ಗೆಲ್ಲಲೂ ಮೋದಿ ಕಾರಣವಾಗಿರಬಹುದು ಎಂದು ಲೇವಡಿ ಮಾಡಿದೆ.
 

‘ಬಿಜೆಪಿಯ ಯಾವುದೇ ನಾಯಕರು ಯಾಕೆ ಈ ಪ್ರತಿಭಾವಂತ ಹರ್ಯಾಣದ ಯುವತಿ ಮಾನುಷಿ ಗೆದ್ದಿದ್ದು ಪ್ರಧಾನಿ ಮೋದಿಯಿಂದ ಎಂದು ಹೊಗಳಿಕೆ ಹಾಕಿಕೊಳ್ಳಲಿಲ್ಲ ಎಂದು ಅಚ್ಚರಿಯಾಗುತ್ತಿದೆ’ ಎಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ವರದಿ ಮಾಡಲಾಗಿದೆ.

‘ಪ್ರಧಾನಿ ಮೋದಿಯವರ ನೋಟು ನಿಷೇಧದ ಪರಿಣಾಮ ಜನರ ಬಳಿ ಚಿಲ್ಲರೆಯೇ ಇರಲಿಲ್ಲ. ಜನರ ಬಳಿ ಏಕೈಕ ಆಯ್ಕೆಯಿದ್ದಿದ್ದು ಈ ‘ಚಿಲ್ಲರ್’ ಮಾತ್ರ. ಹಾಗಾಗಿ ಯಾಕೆ ಇವರ ಗೆಲುವಿಗೆ ಮೋದಿ ಕಾರಣ ಎಂದು ಮೋದಿ ಹಿಂಬಾಲಕರು ಹೇಳಲಿಲ್ಲೆಎಂದು ಅಚ್ಚರಿಯಾಗುತ್ತಿದೆ ‘ ಎಂದು ವರದಿಯಲ್ಲಿ ವ್ಯಂಗ್ಯವಾಗಿ ಬರೆಯಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಶಾಸಕ ಸಂಜಯ್ ಸೆಗಣಿ ತಿಂದ್ರೆ, ಹೆಗಡೆ ಬೂಟ್ ನೆಕ್ಕಿದ್ದಾನೆ: ಸಚಿವ ಅಂಜನೇಯ