Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಬಿಜೆಪಿ ಶಾಸಕ ಸಂಜಯ್ ಸೆಗಣಿ ತಿಂದ್ರೆ, ಹೆಗಡೆ ಬೂಟ್ ನೆಕ್ಕಿದ್ದಾನೆ: ಸಚಿವ ಅಂಜನೇಯ

webdunia
ಮಂಗಳವಾರ, 21 ನವೆಂಬರ್ 2017 (17:30 IST)
ಬಿಜೆಪಿ ಶಾಸಕ ಸಂಜಯ್ ಸೆಗಣಿ ತಿಂದಿರಬಹುದು. ಕೇಂದ್ರ ಸಚಿವ ಅನಂತಕುಮಾರ ಬೂಟ್ ನೆಕ್ಕಿರಬಹುದು. ಅದಕ್ಕೆ ಅಂತಹ ಹೇಳಿಕೆ ಕೊಡುತ್ತಾರೆ ಎಂದು ಸಮಾಜಕಲ್ಯಾಣ ಖಾತೆ ಸಚಿವ ಎಚ್.ಅಂಜನೇಯ ವಾಗ್ದಾಳಿ ನಡೆಸಿದ್ದಾರೆ.
 
ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವುದನ್ನು ಅರಿತ ಬಿಜೆಪಿ ಮುಖಂಡರಿಗೆ ಹುಚ್ಚು ಹಿಡಿದಂತಾಗಿದೆ. ಹತಾಷೆಯಲ್ಲಿ ಎಲ್ಲರ ವಿರುದ್ಧವು ಮನಬಂದಂತೆ ಅಸಂಸ್ಕ್ರತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. 
 
ವಿಪಕ್ಷಗಳಾಗಲಿ ಅಥವಾ ಸ್ವಪಕ್ಷವಾಗಲಿ ನಾಯಕರು ಯಾವಾಗಲೂ ಆರೋಗ್ಯಕರ ಆರೋಪ ಮಾಡಬೇಕು. ಜನತಾ ನ್ಯಾಯಾಲಯದಲ್ಲಿ ತೀರ್ಪು ಅಂತಿಮವಾಗಲಿದೆ. ಯಾವ ಪಕ್ಷ ಸರಕಾರ ರಚಿಸಬೇಕು ಎನ್ನುವುದನ್ನು ಅವರೇ ನಿರ್ಧರಿಸುತ್ತಾರೆ ಎಂದರು.
 
ರಾಜ್ಯದ ಮುಖ್ಯಮಂತ್ರಿಯೊಬ್ಬರ ವಿರುದ್ಧ ಯಾವ ರೀತಿ ಹೇಳಿಕೆ ನೀಡಬೇಕು ಎಂದು ಅರಿಯದ ಬಿಜೆಪಿ ನಾಯಕರು ರಾಜ್ಯವನ್ನಾಳಲು ಹೊರಟಿದ್ದಾರೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಅಂಜನೇಯ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಇಂಧನ ಇಲಾಖೆಯ ಅವ್ಯವಹಾರ: ಡಿಕೆಶಿಯಿಂದ ಸದನ ಸಮಿತಿ ವರದಿ ಮಂಡನೆ