ನವದೆಹಲಿ: ಇಂದಿನಿಂದ ಸಂಸತ್ ನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಈ ಅಧಿವೇಶನದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳಿಗೆ ಎರಡು ಅಸ್ತ್ರ ಸಿಕ್ಕಿದೆ.
ಈ ಬಾರಿ ಸಂಸತ್ ಕಲಾಪದಲ್ಲಿ ಸುಮಾರು 10 ಪ್ರಮುಖ ಬಿಲ್ ಗಳನ್ನು ಕೇಂದ್ರ ಸರ್ಕಾರ ಮಂಡಿಸಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ವಿಪಕ್ಷಗಳು ಎಸ್ಐಆರ್ ಮತ್ತು ದೆಹಲಿ ವಾಯುಮಾಲಿನ್ಯ ವಿಚಾರವಾಗಿ ಸರ್ಕಾರದ ವಿರುದ್ಧ ಹೋರಾಡಲು ಅಸ್ತ್ರ ರೆಡಿ ಮಾಡಿಕೊಂಡಿವೆ.
ಈಗಾಗಲೇ ರಾಹುಲ್ ಗಾಂಧಿ ಸೋಷಿಯಲ್ ಮೀಡಿಯಾ ಮೂಲಕ ದೆಹಲಿ ವಾಯು ಮಾಲಿನ್ಯ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಮೋದಿ ಸರ್ಕಾರ ಯಾಕೆ ವಾಯುಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದರು. ಈ ವಿಚಾರವನ್ನು ಅವರು ಸಂಸತ್ ನಲ್ಲೂ ಮಂಡಿಸುವ ಸಾಧ್ಯತೆಯಿದೆ.
ಇನ್ನು, ಎಸ್ಐಆರ್ ವಿಚಾರವಾಗಿ ತಮಿಳುನಾಡಿನ ಡಿಎಂಕೆ ಪಕ್ಷ ಮತ್ತು ಪಶ್ಚಿಮ ಬಂಗಾಲದ ಟಿಎಂಸಿ ಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳುವ ಸಾಧ್ಯತೆಯಿದೆ. ದೇಶದಾದ್ಯಂತ ಮತಪಟ್ಟಿ ಪರಿಷ್ಕರಣೆಗೆ ಕಾಂಗ್ರೆಸ್ ಕೂಡಾ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಹೀಗಾಗಿ ಕಾಂಗ್ರೆಸ್ ಕೂಡಾ ಈ ವಿಚಾರದಲ್ಲಿ ಇತರೆ ವಿಪಕ್ಷಗಳ ಜೊತೆ ಕೈ ಜೋಡಿಸಬಹುದು. ಈ ಎರಡು ವಿಚಾರಗಳನ್ನು ಎದುರಿಸಲು ಅತ್ತ ಕೇಂದ್ರ ಸರ್ಕಾರವೂ ತಯಾರಾಗಿದೆ.