ಬೆಂಗಳೂರು: ರಾಜ್ಯದಲ್ಲಿ ಈಗ ಮಳೆ ಹೋಗಿ ಚಳಿಗಾಲ ಆವರಿಸಿಕೊಂಡಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಚಳಿಗೆ ಗಡ ಗಡ ಎನ್ನುವಂತಾಗಿದೆ. ಈ ವಾರದ ಹವಾಮಾನ ಹೇಗಿರಲಿದೆ ಇಲ್ಲಿದೆ ನೋಡಿ.
ಶ್ರೀಲಂಕಾದ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ವಿಪರೀತ ಚಳಿ ಕಂಡುಬರುತ್ತಿತ್ತು. ಅದರಲ್ಲೂ ದಿನವಿಡೀ ಮೋಡ ಕವಿದ ವಾತಾವರಣವಿತ್ತು.
ಹವಾಮಾನ ತಜ್ಞರ ಪ್ರಕಾರ ಈ ವಾರದಿಂದಲೇ ಚಳಿಗಾಲ ಶುರುವಾಗಲಿದೆ. ಈ ಬಾರಿ ಚಳಿ ತೀವ್ರವಾಗಿರಲಿದೆ ಎಂದು ಹವಾಮಾನ ವರದಿಗಳು ಈಗಾಗಲೇ ಮುನ್ಸೂಚನೆ ನೀಡಿವೆ. ಈ ಬಾರಿ ಹಗಲು ಹೊತ್ತಿನಲ್ಲಿ ಚಳಿ ಕಡಿಮೆಯಿರಲಿದ್ದು, ರಾತ್ರಿ ತೀವ್ರ ಚಳಿಯಿರಲಿದೆ ಎನ್ನಲಾಗಿದೆ.
ವಾರಂತ್ಯದ ವೇಳೆ ಕನಿಷ್ಠ ತಾಪಮಾನ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ. ವಿಪರೀತ ಚಳಿಗಾಳಿ, ತೇವಾಂಶದಿಂದಾಗಿ ಬೆಂಗಳೂರಿನಲ್ಲಿ ಜ್ವರ, ಶೀತದಂತಹ ಆರೋಗ್ಯ ಸಮಸ್ಯೆಗಳು ಹೆಚ್ಚಾಗಲಿದೆ. ಹೀಗಾಗಿ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಸೂಕ್ತ.