ಉತ್ತರ ಪ್ರದೇಶ : 40 ವರ್ಷದ ವ್ಯಕ್ತಿಯೊಬ್ಬ ಜನ್ಮ ನೀಡಿದ ಮಗಳ ಮೇಲೆ ನಿರಂತರ ಅತ್ಯಾಚಾರ  ಮಾಡಿ 2 ಬಾರಿ ಗರ್ಭಪಾತ ಮಾಡಿಸಿದ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ನಡೆದಿದೆ.
									
										
								
																	
ಪಾಪಿ ತಂದೆ ತನ್ನ 19 ವರ್ಷದ ಮಗಳ ಮೇಲೆ ಕಳೆದ 6 ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನಂತೆ. ಅಷ್ಟೇ ಅಲ್ಲದೇ ಹೊಡೆದು ಹಿಂಸೆ ನೀಡುತ್ತಿದ್ದ ಕಾರಣ ತಾಯಿ ಕೂಡ ಈ ಬಗ್ಗೆ ತುಟಿ ಬಿಚ್ಚುತ್ತಿರಲಿಲ್ಲವಂತೆ. ಇದರ ಪರಿಣಾಮ ಮಗಳು 2 ಬಾರಿ ಗರ್ಭಿಣಿಯಾಗಿದ್ದು, ಆಕೆಗೆ ಗರ್ಭಪಾತ ಕೂಡ ಮಾಡಿಸಿದ್ದಾನಂತೆ.
									
			
			 
 			
 
 			
			                     
							
							
			        							
								
																	
ನಂತರ ಮಗಳಿಗೆ ಮದುವೆ ಮಾಡಿದ ಈ ಪಾಪಿ ತಂದೆ ಆಕೆ ತವರಿಗೆ ಬಂದಾಗಲೆಲ್ಲಾ ಆಕೆಯ ಮೇಲೆ ಮತ್ತೆ ಅತ್ಯಾಚಾರ ಎಸಗುತ್ತಿದ್ದಾನಂತೆ. ಆದರೆ ತಂದೆಯ ಈ ನೀಚ ವರ್ತನೆಯಿಂದ ಬೇಸತ್ತ ಮಗಳು ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
									
										
								
																	
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.