ಮತದಾನದ ಪ್ರಮಾಣ ಹೆಚ್ಚಿಸಲು ಈ ಬೈಕ್ ಕಂಪೆನಿ ಮತದಾರರಿಗೆ ನೀಡುತ್ತಿದೆ ಬಂಪರ್ ಆಫರ್

ಸೋಮವಾರ, 6 ಮೇ 2019 (11:28 IST)
ಉತ್ತರ ಪ್ರದೇಶ : ಇಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ಹಾಗೂ ಮತಗಟ್ಟೆಗೆ ಮತದಾರರನ್ನು ಕರೆತರುವ ಸಲುವಾಗಿ ರ್ಯಾರ್ಪಿಡೋ ಬೈಕ್ ಕಂಪೆನಿ ಮತದಾರರಿಗೆ  ಆಫರ್ ವೊಂದನ್ನು ನೀಡಿದೆ.
ಜನರು ಮತದಾನ ಮಾಡಲು ಮತಗಟ್ಟೆಗೆ ಬರಲು ಆಗದೇ ಮತದಾನದಿಂದ ತಪ್ಪಿಸಿಕೊಳ್ಳಬಾರದು ಎಂದು ಬೈಕ್ ನಲ್ಲಿ ಹೋಗಿ ಮತದಾನ ಮಾಡಿ ಬನ್ನಿ ಎಂಬ ಆಫರ್ ನ್ನು ರ್ಯಾಪಿಡೋ ಬೈಕ್ ಕಂಪೆನಿ ನೀಡುತ್ತಿದೆ. ಅದಕ್ಕಾಗಿ ಮೊಬೈಲ್ ಆಪ್ ಮೂಲಕ ಐ ಓಟ್ ಎಂಬ ಕೋಡ್ ಬಳಸಿ ಬೈಕ್ ಮುಂಗಡವಾಗಿ ಬುಕ್ ಮಾಡಬೇಕು.


ಆದರೆ ಆಫರ್ ಇರೋದು ಉತ್ತರ ಪ್ರದೇಶದ ಲಕ್ನೋ ಜನತೆಗೆ ಮಾತ್ರ. ಅಲ್ಲದೇ ಈ ಸೌಲಭ್ಯ ಕೇವಲ ಮತದಾನದ ಸಮಯದಲ್ಲಿ ಮಾತ್ರ ಇರುತ್ತದೆ ಎಂಬುದಾಗಿ ಕಂಪೆನಿ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಾಜೀವ್ ಗಾಂಧಿಯನ್ನು ನಂ.1 ಭ್ರಷ್ಟಾಚಾರಿ ಎಂದ ಪ್ರಧಾನಿ ಮೋದಿ ಮೇಲೆ ಗರಂ ಆದ ಸಿದ್ಧರಾಮಯ್ಯ