Publish Date: Sat, 04 May 2019 (12:12 IST)
Updated Date: Sat, 04 May 2019 (12:21 IST)
ಲಕ್ನೋ : ವರ ನೀರಿನ ಗ್ಲಾಸ್ ಎತ್ತಲಿಲ್ಲ ಎಂದು ವಧು ಆತನನ್ನು ಮದುವೆಯಾಗಲು ನಿರಾಕರಿಸಿ ಮದುವೆ ಮುರಿದುಕೊಂಡ ಘಟನೆ ಉತ್ತರ ಪ್ರದೇಶದ ಲಕ್ಕೀಂಪುರದ ಲೇರಿಯಲ್ಲಿ ನಡೆದಿದೆ.
ವಧುವಿನ ತಂದೆ ತನ್ನ ಮಗಳ ಮದುವೆಯನ್ನು ಮಿತೌಲಿ ಗ್ರಾಮದ ಯುವಕನೊಂದಿಗೆ ನಿಶ್ಚಯ ಮಾಡಿದ್ದರು. ಗುರುವಾರ ಈ ಜೋಡಿಯ ನಿಶ್ಚಿತಾರ್ಥ ಕೂಡ ನಡೆದಿತ್ತು. ಪೂಜೆಯ ಸಂದರ್ಭದಲ್ಲಿ ಪುರೋಹಿತರು ಗ್ಲಾಸ್ ಎತ್ತಿಕೊಂಡು ನೀರನ್ನು ಸಿಂಪಡಿಸಲು ಹೇಳಿದ್ದಾರೆ. ಆದರೆ ವರನಿಗೆ ಗ್ಲಾಸ್ ಎತ್ತಲು ಸಾಧ್ಯವಾಗದೆ ಆತನ ಕೈ ನಡುಗಿದೆ. ಇದನ್ನು ನೋಡಿದ ವಧು ಆತನನ್ನು ಮದುವೆಯಾಗಲು ನಿರಾಕರಿಸಿದ್ದಳು.
ಈ ಘಟನೆಯಿಂದ ಎರಡು ಕಡೆಯವರ ನಡುವೆ ಜಗಳ ಶುರುವಾಗಿದ್ದು, ನಂತರ ಸ್ಥಳಕ್ಕೆ ಪೊಲೀಸರು ಬಂದು ಎರಡೂ ಕಡೆಯವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಮಾತುಕತೆ ನಡೆಸಿದ್ದರೂ ವಧು ಮದುವೆಯಾಗಲು ನಿರಾಕರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.