Select Your Language

Notifications

webdunia
webdunia
webdunia
webdunia

ಭಾರತದ ಮೇಲೆ ವಿಷ ಅನಿಲಗಳನ್ನು ಬಿಡುಗಡೆ ಮಾಡಿದ ಚೀನಾ, ಪಾಕ್: ಬಿಜೆಪಿ

webdunia
ಗುರುವಾರ, 7 ನವೆಂಬರ್ 2019 (09:13 IST)
ಲಕ್ನೋ : ನಮ್ಮ ದೇಶದ ಮೇಲೆ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಚೀನಾ ವಿಷ ಅನಿಲಗಳನ್ನು ಬಿಡುಗಡೆ ಮಾಡಿದೆ ಎಂದು ಬಿಜೆಪಿ ಮುಖಂಡ ವಿನೀತ್ ಅಗರ್ವಾಲ್ ಶಾರದಾ ಗಂಭೀರ ಆರೋಪ ಮಾಡಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಸಮಸ್ಯೆ ಉಂಟಾಗಿದ್ದು, ಜನರು ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಬಿಜೆಪಿ ಮುಖಂಡ ವಿನೀತ್ ಅಗರ್ವಾಲ್ ಶಾರದಾ, ಪಾಕಿಸ್ತಾನ ಮತ್ತು ಚೀನಾ ನಮಗೆ ಭಯಪಡುತ್ತವೆ.


ಆದಕಾರಣ ಪಾಕಿಸ್ತಾನ ಯಾವುದೋ ವಿಷಕಾರಿ ಅನಿಲವನ್ನು ಬಿಡುಗಡೆ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅಧಿಕಾರ ವಹಿಸಿಕೊಂಡಾಗಿನಿಂದಲೂ ಪಾಕಿಸ್ತಾನ ನಿರಾಶೆಗೊಂಡಿದೆ. ಅಲ್ಲದೇ ಈವರೆಗಿನ ಯಾವುದೇ ಯುದ್ಧದಲ್ಲಿ ಒಂದೂ ಗೆಲುವು ದಾಖಲಿಸಲು ಸಾಧ್ಯವಾಗದ ಕಾರಣ ಭಾರತದ ವಿರುದ್ಧ ಈ ರೀತಿಯ ತಂತ್ರಗಳನ್ನು ಪಾಕಿಸ್ತಾನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.


Share this Story:

Follow Webdunia Hindi

ಮುಂದಿನ ಸುದ್ದಿ

ಪ್ರೇಮಿಗಳನ್ನು ಅಟ್ಟಾಡಿಸಿ ಕೊಂದ ಸಂಬಂಧಿಕರು