Publish Date: Wed, 06 Nov 2019 (12:12 IST)
Updated Date: Wed, 06 Nov 2019 (15:47 IST)
ಬೆಂಗಳೂರು : ಮನೆಯ ಅಂದಕ್ಕಾಗಿ ವ್ಯಕ್ತಿಯೊಬ್ಬ ಹಚ್ಚ ಹಸಿರಾದ ಮರಕ್ಕೆ ವಿಷ ಹಾಕಿ ಕೊಂದ ಘಟನೆ ಬೆಂಗಳೂರಿನ ಆರ್.ಆರ್. ನಗರದ ಪಂಚಶೀಲಾ ಬ್ಲಾಕ್ ನಲ್ಲಿ ನಡೆದಿದೆ.
ನರೇಂದ್ರ ಎಂಬಾತ ಇಂತಹ ಕೃತ್ಯ ಎಸಗಿದ ಪಾಪಿ. ಈತ ಹೊಸದಾಗಿ ಮನೆಯನ್ನು ನಿರ್ಮಿಸಿದ್ದ. ಆದರೆ ಮನೆಯ ಎದುರುಗಡೆ ಇರುವ 15 ವರ್ಷದ ಹಳೆಯ ಮರ ಮನೆಯ ಅಂದವನ್ನು ಕೆಡಿಸುತ್ತಿದೆ ಎಂದು ಮರದ ಸುತ್ತಲೂ ತೂತು ಮಾಡಿ 40 ವಿಷಕಾರಿ ಇಂಜೆಕ್ಷನ್ ನ್ನು ಹಾಕಿದ್ದಾನೆ.
ಇದರಿಂದ ಮರ ಸತ್ತುಹೋಗಿದ್ದು, ಉಸಿರು ಕೊಡೋ ಮರಕ್ಕಿಂತ ಈತನಿಗೆ ಮನೆಯ ಅಂದವೇ ಹೆಚ್ಚಾಯ್ತಾ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.