Select Your Language

Notifications

webdunia
webdunia
webdunia
webdunia

ಯಾದಗಿರಿ ಠಾಣೆಯ ಪಿಎಸ್ ಐ ವರ್ಗಾವಣೆ ಹಿಂದಿದೆಯಾ ಹೆಚ್.ಡಿ.ಡಿ ಕೈವಾಡ?

ಯಾದಗಿರಿ ಠಾಣೆಯ ಪಿಎಸ್ ಐ ವರ್ಗಾವಣೆ ಹಿಂದಿದೆಯಾ ಹೆಚ್.ಡಿ.ಡಿ ಕೈವಾಡ?
ಬೆಂಗಳೂರು , ಬುಧವಾರ, 6 ನವೆಂಬರ್ 2019 (11:56 IST)
ಬೆಂಗಳೂರು : ಜೆಡಿಎಸ್ ಕಾರ್ಯಕರ್ತರ ಮೇಲೆ ದೌರ್ಜನ್ಯವೆಸಗಿದ ಯಾದಗಿರಿ ಠಾಣೆಯ ಪೊಲೀಸ್ ಅಧಿಕಾರಿಯನ್ನ ವರ್ಗಾವಣೆ ಆದೇಶಿಸಿರುವುದಾಗಿ  ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.


ಆದರೆ ಜೆಡಿಎಸ್ ಕಾರ್ಯಕರ್ತರ ಬಾಯಲ್ಲಿ ಪಿಸ್ತೂಲ್ ಇಟ್ಟು ಹೆದರಿಸಿದ ಯಾದಗಿರಿ ಠಾಣೆಯ ಪಿಎಸ್ ಐ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮಾತಿಗೆ ಮಣಿದು ಸಿಎಂ ಪೊಲೀಸ್ ಅಧಿಕಾರಿಯನ್ನ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.

 

ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಂ ಯಡಿಯೂರಪ್ಪ, ಹೆಚ್.ಡಿ.ದೇವೇಗೌಡರು ನನಗೆ ಫೋನ್ ಮಾಡಿ ಮಾತನಾಡಿಲ್ಲ. ಅವರು ನನಗೆ ಕರೆ ಮಾಡಿದ್ದಾರೆ ಎಂಬುದರಲ್ಲಿ ಸತ್ಯಾಂಶ ಇಲ್ಲ. ನಾನು ಎಲ್ಲೂ ದೇವೇಗೌಡರ ಹೆಸರನ್ನೂ ಪ್ರಸ್ತಾಪ ಮಾಡಿಲ್ಲ ಎಂದು ತಿಳಿಸಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬಿಎಸ್ ವೈ ಆಡಿಯೋ ಲೀಕ್; ಆಂತರಿಕ ತನಿಖೆಗೆ ಸಮಿತಿ ರಚನೆ ವಿಳಂಬವಾಗುತ್ತಿರುವುದೇಕೆ?