ಪ್ರೇಮಿಗಳನ್ನು ಅಟ್ಟಾಡಿಸಿ ಕೊಂದ ಸಂಬಂಧಿಕರು

ಬುಧವಾರ, 6 ನವೆಂಬರ್ 2019 (19:20 IST)
ಅವರು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆ ಜೋಡಿಯ ಪ್ರೀತಿಯ ಮೇಲೆ ಯಾರ ಕಣ್ಣು ಬಿದ್ದಿತೋ? ಭೀಕರವಾಗಿ ಪ್ರೇಮ ಪಕ್ಷಿಗಳು ಕೊಲೆಯಾಗಿ ಹೋಗಿದ್ದಾರೆ.

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ಮರ್ಯಾದಾ ಹತ್ಯೆ ನಡೆದಿದೆ.

ರಮೇಶ್ ಮಾದರ (28) ಹಾಗೂ ಗಂಗಮ್ಮ (22) ಎಂಬುರನ್ನು ಗಂಗಮ್ಮಳ ಸಂಬಂಧಿಕರು ಕೊಲೆ ಮಾಡಿದ್ದಾರೆ.

ಇವರಿಬ್ಬರ ಅಂತರ್ಜಾತಿ ವಿವಾಹಕ್ಕೆ ಪೋಷಕರು ಸಮ್ಮತಿ ನೀಡಿರಲಿಲ್ಲ. ಆದರೂ ಪ್ರೀತಿ ಮಾಡಿದ ಜೋಡಿ ಮದುವೆಯಾಗಿದ್ದರು. ಹೀಗಾಗಿ ರೊಚ್ಚಿಗೆದ್ದ ಗಂಗಮ್ಮಳ ಸಂಬಂಧಿಕರು ಇಬ್ಬರನ್ನೂ ಕೊಲೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟಿಪ್ಪು ಜಯಂತಿ ರದ್ದು ಆದೇಶ ಮರು ಪರಿಶೀಲಿಸಿ ಎಂದ ಹೈಕೋರ್ಟ್