ಮಹಿಳಾ ತಹಸೀಲ್ದಾರ್ ಗೆ ಬೆಂಕಿ ಹಚ್ಚಿದ ಕಿರಾತಕ

ಸೋಮವಾರ, 4 ನವೆಂಬರ್ 2019 (19:12 IST)

ಮಹಿಳಾ ತಹಸೀಲ್ದಾರ್ ಒಬ್ಬರಿಗೆ ಕಚೇರಿಯಲ್ಲೇ ಪೆಟ್ರೋಲ್ ಸುರಿದು ಕಿರಾತಕನೊಬ್ಬ ಬೆಂಕಿ ಹಚ್ಚಿ ಕೊಲೆ ಮಾಡಿರೋ ಘಟನೆ ನಡೆದಿದೆ.
 

ಊಟದ ಸಮಯದಲ್ಲಿ ಮಹಿಳಾ ತಹಸೀಲ್ದಾರ್ ವಿಜಯ ರೆಡ್ಡಿ ಎಂಬುವರ ಮೇಲೆ ಸುರೇಶ್ ರೆಡ್ಡಿ ಎಂಬಾತ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದಾನೆ.

ಹೈದರಾಬಾದ್ ಹೈಯತ್ ನಗರದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.

ಬೆಂಕಿಯಿಂದ ನರಳುತ್ತಲೇ ಮಹಿಳಾ ತಹಸೀಲ್ದಾರ್ ವಿಜಯ ರೆಡ್ಡಿ ಕಚೇರಿಯಲ್ಲಿಯೇ ಸಾವನ್ನಪ್ಪಿದ್ದಾರೆ. ಆರೋಪಿ ಸುರೇಶ್ ರೆಡ್ಡಿಗೂ ಗಾಯಗಳಾಗಿವೆ. ಘಟನೆಯಲ್ಲಿ ಕಚೇರಿಯ ಇಬ್ಬರು ಸಿಬ್ಬಂದಿಗೂ ಗಾಯಗಳಾಗಿವೆ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಎಂಟಿಬಿ ಪರ ಸಿಎಂ ಯಡಿಯೂರಪ್ಪ ಬ್ಯಾಟಿಂಗ್