Select Your Language

Notifications

webdunia
webdunia
webdunia
webdunia

ಭಾರೀ ಅವಘಡ – ಬೆಂಕಿ ಹೊತ್ತಿ ಉರಿದ ಬಸ್

ಭಾರೀ ಅವಘಡ – ಬೆಂಕಿ ಹೊತ್ತಿ ಉರಿದ ಬಸ್
ಚಿತ್ರದುರ್ಗ , ಭಾನುವಾರ, 27 ಅಕ್ಟೋಬರ್ 2019 (15:11 IST)
ಸಂಭವಿಸಿದ ಭಾರೀ ಅವಘಡವೊಂದರಲ್ಲಿ ಬಸ್ ವೊಂದು ಬೆಂಕಿ ಹೊತ್ತಿ ಉರಿದಿದೆ.

ಲಾರಿ ಮತ್ತು  ಖಾಸಗಿ ಬಸ್ ನಡುವೆ ಢಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಬಸ್ ಬೆಂಕಿ ಹೊತ್ತಿಕೊಂಡು ಉರಿದಿದೆ.  

ಲಾರಿ ಚಾಲಕ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕಪಿಲೆಹಟ್ಟಿ ಬಳಿ ಘಟನೆ ನಡೆದಿದೆ.

ಬೆಂಗಳೂರಿನಿಂದ ಬಳ್ಳಾರಿಗೆ ತರಳುತ್ತಿದ್ದ ಬಸ್ ಗೆ  ಲಾರಿ ಢಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಢಿಕ್ಕಿ ಬಳಿಕ ಏಕಾಏಕಿ ಬಸ್ ನಲ್ಲಿ ಕಾಣಿಸಿಕೊಂಡಿದೆ ಬೆಂಕಿ.

ಲಾರಿ ಚಾಲಕ ವೆಂಕಟೇಶ್ (35) ಸಾವನ್ನಪ್ಪಿದ್ದಾನೆ. ಗಾಯಾಳುಗಳನ್ನು ಹಿರಿಯೂರು ತಾಲ್ಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.  



Share this Story:

Follow Webdunia kannada

ಮುಂದಿನ ಸುದ್ದಿ

ಅನರ್ಹ ಶಾಸಕರಿಗೆ ಟಿಕೆಟ್ ನೀಡೋ ಪ್ರಶ್ನೆಯೇ ಇಲ್ಲ ಎಂದ ಬಿಜೆಪಿ ಮುಖಂಡ