Select Your Language

Notifications

webdunia
webdunia
webdunia
webdunia

ಸಿಎಂ ಗೆ ಬಸ್ ಟಿಕೆಟ್ ಬುಕ್ ಮಾಡಿ ದೀಪಾವಳಿ ಹಬ್ಬಕ್ಕೆ ಆಹ್ವಾನಿಸಿದ ಪ್ರಯಾಣಿಕ!

ಸಿಎಂ ಗೆ ಬಸ್ ಟಿಕೆಟ್ ಬುಕ್ ಮಾಡಿ ದೀಪಾವಳಿ  ಹಬ್ಬಕ್ಕೆ ಆಹ್ವಾನಿಸಿದ ಪ್ರಯಾಣಿಕ!
ಕಾರವಾರ , ಶುಕ್ರವಾರ, 25 ಅಕ್ಟೋಬರ್ 2019 (07:26 IST)
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಪ್ರಯಾಣಿಕರೊಬ್ಬರು  ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಬಸ್ ಟಿಕೆಟ್ ಬುಕ್ ಮಾಡಿ ದೀಪಾವಳಿ  ಹಬ್ಬಕ್ಕೆ ಆಹ್ವಾನಿಸಿದ್ದಾರೆ.




ದೀಪಾವಳಿ ಹಬ್ಬಕ್ಕೆ ಖಾಸಗಿ ಬಸ್ ಗಳ ದುಬಾರಿ ದರದಿಂದ ಕಂಗೆಟ್ಟಿರುವ ಹೊನ್ನಾವರ ತಾಲೂಕಿನ ಪ್ರಯಾಣಿಕ ರಾಜೇಶ್ ಈ ರೀತಿ ಮಾಡಿದ್ದು, ಖಾಸಗಿ ಬಸ್ ಗಳ ದುಬಾರಿ ದರ ವಿಧಿಸುವ ಬಗ್ಗೆ ಸಿಎಂ ಗಮನಕ್ಕೆ ತರಲು ತಾವು ಬುಕ್ ಮಾಡಿದ ಟಿಕೆಟ್ ನ ಫೊಟೋ ಟ್ವೀಟ್ ಮಾಡಿ ಸಿಎಂ ಗೆ ಟ್ಯಾಗ್ ಮಾಡಿದ್ದಾರೆ. ಅಲ್ಲದೇ ಟಿಕೆಟ್ ನ್ನು ಸಿಎಂ ನ ಬೆಂಗಳೂರು ಕಚೇರಿಯ ವಿಳಾಸಕ್ಕೆ ಕಳುಹಿಸಿಕೊಟ್ಟಿದ್ದಾರೆ.


ಖಾಸಗಿ ಬಸ್ ದರವು ಸಾಮಾನ್ಯ ದಿನಗಳಲ್ಲಿ 700, 800 ರೂ ಗಳಿದ್ದರೆ ಹಬ್ಬದ ದಿನಗಳಲ್ಲಿ ಮಾತ್ರ 1500, 2500ಕ್ಕೂ ಅಧಿಕವಾಗಿರುತ್ತದೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಆದಕಾರಣ ಸಿಎಂ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಫಲಿತಾಂಶಕ್ಕೂ ಮೊದಲೇ ಸಿಎಂ ಸ್ಥಾನಕ್ಕಾಗಿ ಬಿಜೆಪಿ – ಶಿವಸೇನೆ ನಡುವೆ ಕಿತ್ತಾಟ