Select Your Language

Notifications

webdunia
webdunia
webdunia
webdunia

ದೀಪಾವಳಿ ಹಬ್ಬವನ್ನು ಮಾತ್ರ ಅಮಾವಾಸ್ಯೆ ದಿನದಂದೇ ಆಚರಿಸುವುದು ಯಾಕೆ ಗೊತ್ತಾ?

ದೀಪಾವಳಿ ಹಬ್ಬವನ್ನು ಮಾತ್ರ ಅಮಾವಾಸ್ಯೆ ದಿನದಂದೇ ಆಚರಿಸುವುದು ಯಾಕೆ ಗೊತ್ತಾ?
ಬೆಂಗಳೂರು , ಗುರುವಾರ, 24 ಅಕ್ಟೋಬರ್ 2019 (17:58 IST)
ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆ ದಿನದಂದು ಯಾವುದೇ ಹಬ್ಬ ಹರಿದಿನಗಳನ್ನು ಆಚರಿಸುವುದಿಲ್ಲ. ಆದರೆ ದೀಪಾವಳಿ ಹಬ್ಬವನ್ನು ಮಾತ್ರ ಅಮವಾಸ್ಯೆ ದಿನದಂದೇ ಆಚರಿಸಲಾಗುತ್ತದೆ. ಇದಕ್ಕೆ ಕಾರಣವೇನು ಎಂಬ ಮಾಹಿತಿ ಇಲ್ಲಿದೆ ನೋಡಿ.




ದೀಪಾವಳಿ ಹಬ್ಬ ಕಾರ್ತಿಕ ಮಾಸದಲ್ಲಿ ಬರುತ್ತದೆ. ಈ ದಿನದಂದು ಸೂರ್ಯ ಮತ್ತು ಚಂದ್ರ ತುಲಾ ರಾಶಿಗೆ ಪ್ರವೇಶಿಸುತ್ತಾರೆ. ತುಲಾ ಎಂದರೆ ವ್ಯಾಪಾರ ಎಂದರ್ಥ. ಈ ದಿನ ವ್ಯಾಪಾರಗಳಿಗೆ ತುಂಬಾ ಉತ್ತಮವಾದ ದಿನವಾದ್ದರಿಂದ  ಈ ಅಮವಾಸ್ಯೆ ಉಳಿದ ಅಮವಾಸ್ಯೆಗಳಿಗಿಂತ ಭಿನ್ನವಾಗಿರುತ್ತದೆ. ಅಂದು ಸಂಪತ್ತಿನ ದೇವರುಗಳಾದ ಲಕ್ಷ್ಮೀದೇವಿ ಹಾಗೂ ಕುಬೇರನ ಪೂಜೆ ಮಾಡಲಾಗುತ್ತದೆ.


ಆದರೆ ಅಮವಾಸ್ಯೆಯಂದು ಸೂರ್ಯ ದುರ್ಬಲನಾಗಿದ್ದು, ಚಂದ್ರನು ತನ್ನ ಶಕ್ತಿಯನ್ನು ಕಳೆದುಕೊಳ್ಳುವುದರಿಂದ ಸುತ್ತಲೂ ಕತ್ತಲು ಆವರಿಸಿರುತ್ತದೆ. ಆದಕಾರಣ ಅಂದು ಎಲ್ಲರೂ ಹಣತೆಯನ್ನು ಹಚ್ಚಿ ಪೂಜೆಗಳನ್ನು ನೇರವೇರಿಸುತ್ತಾರೆ. ಎಲ್ಲಾ ಕಡೆ ದೀಪಗಳು ಕಂಗೊಳಿಸುತ್ತಿರುವುದರಿಂದ ಆ ದಿನವನ್ನು ದೀಪಾವಳಿ ಎಂದು ಕರೆಯಲಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ