ದೀಪಾವಳಿ ಹಬ್ಬದಂದು ಈ ವಸ್ತುಗಳನ್ನು ಮನೆಗೆ ತಂದರೆ ಧನ ಪ್ರಾಪ್ತಿಯಾಗುತ್ತೆ

ಬುಧವಾರ, 23 ಅಕ್ಟೋಬರ್ 2019 (06:29 IST)
ಬೆಂಗಳೂರು : ಮನೆಯಲ್ಲಿ ಸಂಪತ್ತು ತುಂಬಿ ತುಳಕಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅಂತವರು ದೀಪಾವಳಿ ಹಬ್ಬದಂದು ಈ ವಸ್ತುಗಳಲ್ಲಿ ಯಾವುದಾದರೊಂದು ವಸ್ತುಗಳನ್ನು ನಿಮ್ಮ ಮನೆಗೆ ತಂದರೆ ನಿಮ್ಮ ಮನೆಯಲ್ಲಿ ಕುಬೇರ ಮನೆಯೊಳಗೆ ಬರುತ್ತಾನೆ ಎಂದು ಪಂಡಿತರು ಹೇಳುತ್ತಾರೆ.ದೀಪಾವಳಿ ಹಬ್ಬದಂದು ಶ್ರೀಚಕ್ರವನ್ನು ಮನೆಗೆ ತಂದು ದೇವರ ಮನೆಯಲ್ಲಿಟ್ಟು ಪೂಜೆ ಮಾಡಿದರೆ ಧನ ಪ್ರಾಪ್ತಿಯಾಗುತ್ತದೆ. ಬೆಳ್ಳಿಯ ಲಕ್ಷ್ಮೀ ಅಥವಾ ಬೆಳ್ಳಿಯ ಗಣೇಶನ ಮೂರ್ತಿಯನ್ನು ಹಬ್ಬದದು ಮನೆಗೆ ತಂದು ಪೂಜೆ ಮಾಡಿ. ಹಾಗೇ ಹಬ್ಬದಂದು ತೆಂಗಿನಕಾಯಿ ಯನ್ನು ಮನೆಗೆ ತಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ದೇವರ ಮನೆಯಲ್ಲಿ ಯಾರಿಗೂ ಕಾಣದಂತೆ ಪೂಜೆ ಮಾಡಿದರೆ ಲಕ್ಷ್ಮೀ ತಾನಾಗಿಯೇ ಒಲಿದು ಬರುತ್ತಾಳೆ ಎಂದು ಪಂಡಿತರು ಹೇಳುತ್ತಾರೆ.

 

ಕುಬೇರನ ಪ್ರತಿಮೆಯನ್ನು ಮನೆಗೆ ತಂದು ಉತ್ತರ ದಿಕ್ಕಿನಲ್ಲಿಟ್ಟರೆ ಧನದ ಸುರಿಮಳೆ ಸುರಿಯುತ್ತದೆ. ಹಾಗೇ ಧನ ಲಕ್ಷ್ಮೀಯ ಬೆಳ್ಳಿ ಅಥವಾ ತಾಮ್ರದ ಪಾದಿಕೆಗಳನ್ನು ಹಬ್ಬದಂದು ಮನೆಗೆ ತಂದು ಹಣವಿಡುವ ಸ್ಥಳದಲ್ಲಿ ಇಟ್ಟರೆ ಒಳ್ಳೆಯದು. ಲಕ್ಷ್ಮೀ ಕವಡೆ ಹಾಗೂ ಶಂಖವನ್ನು ಮನೆಗೆ ತಂದರೆ ಧನ ಪ್ರಾಪ್ತಿಯಾಗುತ್ತದೆ ಎಂದು ಪಂಡಿತರು ಹೇಳುತ್ತಾರೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದೀಪಾವಳಿ ಹಬ್ಬದಂದು ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ