ಮನೆಯಲ್ಲಿರುವ ಸಮಸ್ಯೆಗಳು ನಿವಾರಣೆಯಾಗಲು ದೀಪಾವಳಿ ಹಬ್ಬದಂದು ನಿಂಬೆ ಹಣ್ಣಿನಿಂದ ಈ ಕೆಲಸ ಮಾಡಿ

ಗುರುವಾರ, 24 ಅಕ್ಟೋಬರ್ 2019 (08:48 IST)
ಬೆಂಗಳೂರು : ದೀಪಾವಳಿ ಹಬ್ಬದಂದು ಸಾಕ್ಷಾತ್ ಲಕ್ಷ್ಮೀ ದೇವಿಯು ಭೂಲೋಕ ಸಂಚಾರ ಮಾಡುತ್ತಾಳೆ. ಅಂತಹ ಶುಭದಿನದಂದು ನೀವು ನಿಂಬೆ ಹಣ್ಣಿನಿಂದ ಈ ಸಣ್ಣ ಕೆಲಸ ಮಾಡಿದರೆ ಮನೆಯಲ್ಲಿರುವ ಯಾವುದೇ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ.ಬೆಳಿಗ್ಗೆ ಅಥವಾ ಸಂಜೆ 6 ಗಂಟೆಯೊಳಗೆ ನಿಂಬೆ ಹಣ್ಣನ್ನು ಅಂಗೈಯಲ್ಲಿ ತೆಗೆದುಕೊಂಡು ಅದರ ಮೇಲೆ ಪೆನ್ನಿನಿಂದ 101 ಬಾರಿ ಚುಚ್ಚಬೇಕು. ತದನಂತರ ಮನೆಯಲ್ಲಿರುವ ಎಲ್ಲರ ಕೈಯಿಂದ ಆ ನಿಂಬೆ ಹಣ್ಣನ್ನು ಮುಟ್ಟಿಸಿ. ಬಳಿಕ ಮತ್ತೆ ಸೂಜಿಯಿಂದ 101 ಬಾರಿ ಚುಚ್ಚಬೇಕು. ಹೀಗೆ ಚುಚ್ಚುವಾಗ ನಿಂಬೆ ಹಣ್ಣು ಜಾರಿದರೆ ನಿಮ್ಮ ಸಕಲ ದೋಷಗಳು ಕಳೆಯುತ್ತಿದೆ ಎಂದರ್ಥ.

 

ಈ ಕೆಲಸ ಆದ ನಂತರ ಆ ನಿಂಬೆ ಹಣ್ಣನ್ನು ಮೂರು ದಾರಿ ಕೂಡಿರುವ ರಸ್ತೆಯಲ್ಲಿ ನಿಮಗೆ 9 ಬಾರಿ ದೃಷ್ಟಿ ತೆಗೆದುಕೊಂಡು  ಎಸೆದು ಬರಬೇಕು. ಬರುವಾಗ ಯಾರನ್ನು ಮಾತನಾಡಿಸದೆ, ಹಿಂದೆ ತಿರುಗಿ ನೋಡದೆ ಬರಬೇಕು. ಮನೆಯೊಳಗೆ ಬರುವ ಮುಂಚೆ ಕೈಕಾಲು ತೊಳೆದು ಒಳಗೆ ಬರಬೇಕು.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ಪಂಚಾಂಗ ತಿಳಿಯಿರಿ