ಬೆಂಗಳೂರು : ಮಳೆ, ನೆರೆಯಿಂದ ರಾಜ್ಯದ ಜನರು ತತ್ತರಿಸುತ್ತಿರುವ ಈ ವೇಳೆ ಬಿಜೆಪಿ ಸರ್ಕಾರ ಶತದಿನದ ಸಂಭ್ರಮ ಆಚರಿಸಲು ತಯಾರಿ ನಡೆಸುತ್ತಿದೆ.
									
			
			 
 			
 
 			
			                     
							
							
			        							
								
																	
									
										
								
																	
ನವೆಂಬರ್ 2ಕ್ಕೆ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 100 ದಿನವಾಗಲಿದೆ. ಈ ಹಿನ್ನಲೆಯಲ್ಲಿ ಈ ದಿನವನ್ನು ಸಂಭ್ರಮದಿಂದ ಆಚರಿಸಲು ಮತ್ತು ತಮ್ಮ ನೂರು ದಿನದ ಸಾಧನೆಗಳ ಬಗ್ಗೆ ತಿಳಿಸಲು  ಸಿಎಂ ಯಡಿಯೂರಪ್ಪ ಫೋಟೊಶೂಟ್  ಮಾಡಿಸಿಕೊಳ್ಳುತ್ತಿದ್ದಾರೆ.
									
										
								
																	
ಮಳೆ,ನೆರೆಯಿಂದ ತತ್ತರಿಸಿ ಹೋದ ಜನರು ಸಾವು ನೋವು ಅನುಭವಿಸುತ್ತಿರುವ  ಈ ವೇಳೆ ಸರ್ಕಾರದ ಸಂಭ್ರಮಾಚರಣೆ ಮುಖ್ಯವೇ ಎಂಬ ಟೀಕೆ ವ್ಯಕ್ತವಾಗುತ್ತಿದೆ.