Publish Date: Fri, 01 Nov 2019 (17:15 IST)
Updated Date: Fri, 01 Nov 2019 (17:17 IST)
ಕಿಡಿಗೇಡಿಗಳು ಬೆಂಕಿ ಹಚ್ಚಿ ವಿಕೃತ ಆನಂದ ಮೆರೆದಿದ್ದಾರೆ.
ಧಾರವಾಡದ ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮದಲ್ಲಿ ಈರಣ್ಣ ಹಳ್ಯಾಳ ಎಂಬುವರ ಒಡೆತನದ (ಲಾವಣಿ ಹೊಲ) 11 ಎಕರೆ ಶೇಂಗಾ ಬಣವಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ಸಂಪೂರ್ಣ ಹೊಲದಲ್ಲಿನ ಶೇಂಗಾ ಫಸಲು ಸುಟ್ಟು ಬೂದಿಯಾಗಿದೆ.
ರಾತ್ರಿ 8. 30 ಕ್ಕೆ ಕಿಡಿಗೇಡಿಗಳು ಈ ಕೃತ್ಯ ಮಾಡಿದ್ದು, ಯಾವ ಕಾರಣಕ್ಕಾಗಿ ಈ ಕೃತ್ಯ ಎಸೆದಿದ್ದಾರೆ ಮತ್ತು ಯಾರು ಬೆಂಕಿ ಹಚ್ಚಿದ್ದಾರೆ ಎಂಬುದು ಗೊತ್ತಾಗಿಲ್ಲ. ಶೇಂಗಾ ಬೆಳೆ ಸರಿ ಸುಮಾರು 3 ಲಕ್ಷ ರೂಪಾಯಿವರೆಗೆ ಬೆಳೆಬಾಳುತಿತ್ತು, ರೈತನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ರೈತನ ಕುಟುಂಬದವರು ಒತ್ತಾಯ ಮಾಡಿದ್ದಾರೆ.