ಟಿಪ್ಪು ಜಯಂತಿ ರದ್ದು ಆದೇಶ ಮರು ಪರಿಶೀಲಿಸಿ ಎಂದ ಹೈಕೋರ್ಟ್

ಬುಧವಾರ, 6 ನವೆಂಬರ್ 2019 (19:13 IST)
ಟಿಪ್ಪು ಸುಲ್ತಾನ್ ಜಯಂತಿಯ ಆಚರಣೆಯನ್ನು ರಾಜ್ಯ ಸರಕಾರ ರದ್ದು ಮಾಡಿರೋದನ್ನು ಪ್ರಶ್ನೆ ಮಾಡಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.

ಟಿಪ್ಪು ಜಯಂತಿಯನ್ನು ರದ್ದು ಮಾಡಿರೋ ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕು. ಹೀಗಂತ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆಯನ್ನು ನೀಡಿದೆ.

ಉತ್ತರ ಪ್ರದೇಶದ ಬಿಲಾಲ್ ಅಲಿ ಷಾ, ಟಿಪ್ಪು ರಾಷ್ಟ್ರೀಯ ಸೇವಾ ಸಂಘ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು.

ಖಾಸಗಿಯಾಗಿ ಟಿಪ್ಪು ಜಯಂತಿ ಆಚರಣೆಗೆ ನಿರ್ಬಂಧ ವಿಧಿಸಲಾಗುವುದಿಲ್ಲ ಎಂದಿರೋ ಹೈಕೋರ್ಟ್ ಜನೇವರಿ 3ಕ್ಕೆ ವಿಚಾರಣೆ ಮುಂದೂಡಿದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ‘ಯಡಿಯೂರಪ್ಪ ಸರಕಾರ ಉರುಳಿಸೋಕೆ ಬಿಜೆಪಿಯವರಿಂದಲೇ ಕುತಂತ್ರ’