Select Your Language

Notifications

webdunia
webdunia
webdunia
webdunia

ಒಂದು ಕೋಟಿಗೂ ಅಧಿಕ ಗಿಡಗನ್ನು ನೆಟ್ಟಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಟ್ರೀ ಮ್ಯಾನ್‌ ರಾಮಯ್ಯ ಇನ್ನಿಲ್ಲ

Tree Man Daripalli Ramaiah, Telangana CM Revanth Reddy, Padma Shri Awardee

Sampriya

ಹೈದರಾಬಾದ್ , ಶನಿವಾರ, 12 ಏಪ್ರಿಲ್ 2025 (14:18 IST)
Photo Courtesy X
ಹೈದರಾಬಾದ್: ಒಂದು ಕೋಟಿಗೂ ಅಧಿಕ ಸಸಿಗಳನ್ನು ನೆಟ್ಟಿದ್ದ ಪದ್ಮಶ್ರೀ ಪುರಸ್ಕೃತ ಹಾಗೂ ಟ್ರೀ ಮ್ಯಾನ್ ಎಂದೇ ಖ್ಯಾತರಾಗಿದ್ದ ತೆಲಂಗಾಣದ ಕಮ್ಮಂ ಜಿಲ್ಲೆಯ ದಾರಿಪಳ್ಳಿ ರಾಮಯ್ಯ (ವನಜೀವಿ ರಾಮಯ್ಯ) ಅವರು ನಿಧನರಾದರು.

87 ವರ್ಷ ವಯಸ್ಸಿನ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಶುಕ್ರವಾರ ರಾತ್ರಿ ಕಮ್ಮಂನ ದಾರಿಪಳ್ಳಿಯ ತಮ್ಮ ಮನೆಯಲ್ಲಿ ಇಹಲೋಕ ತ್ಯಜಿಸಿದರು. ಕೋಟ್ಯಂತರ ಸಸಿಗಳನ್ನು ನೆಟ್ಟಿದ್ದ ಅವರ ಸಾಮಾಜಿಕ ಸೇವೆಯನ್ನು ಮೆಚ್ಚಿ 2017 ರಲ್ಲಿ ಪದ್ಮಶ್ರೀ ಪುರಸ್ಕಾರವನ್ನು ಅವರಿಗೆ ನೀಡಲಾಗಿತ್ತು.

ವನಜೀವಿ ರಾಮಯ್ಯ ಕಳೆದ 37 ವರ್ಷಗಳಿಂದ ತೆಲಂಗಾಣ ಸೇರಿದಂತೆ ಪ್ರತಿದಿನ ಹಲವೆಡೆ ಸಸಿಗಳನ್ನು ನೆಡುತ್ತಿದ್ದರು. ಆ ಮೂಲಕ ಪರಿಸರ ಉಳಿಸಿ ಎಂದು ಸಂದೇಶ ಸಾರುತ್ತಿದ್ದರು.

ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ವನಜೀವಿ ರಾಮಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇದು ಭರಿಸಲಾಗದ ನಷ್ಟ. ರಾಮಯ್ಯ ಅವರು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಸ್ಮರಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

UPI Down: ಊಟಕ್ಕೆ ಹೋದವರು ಪಾವತಿ ಮಾಡಲಾಗದೇ ಪರದಾಟ