Select Your Language

Notifications

webdunia
webdunia
webdunia
webdunia

ಪ್ರವಾಸಕ್ಕೆ ಮುಕ್ತ ಆಹ್ವಾನ

ಪ್ರವಾಸಕ್ಕೆ ಮುಕ್ತ ಆಹ್ವಾನ
ಆಸ್ಪ್ರೇಲಿಯಾ , ಮಂಗಳವಾರ, 19 ಏಪ್ರಿಲ್ 2022 (11:41 IST)
ಕೋವಿಡ್ ಕಾರಣಕ್ಕೆ ನಿಂತುಹೋಗಿದ್ದ ಪ್ರವಾಸೋದ್ಯಮಕ್ಕೆ ಮರುಜೀವ ನೀಡುವ ನಿಟ್ಟಿನಲ್ಲಿ ಆಸ್ಪ್ರೇಲಿಯಾ ಬೆಂಗಳೂರಿನ ಪ್ರವಾಸಿಗರಿಗೆ ಮುಕ್ತ ಆಹ್ವಾನ ನೀಡಿದೆ.
 
ಈ ನಿಟ್ಟಿನಲ್ಲಿ ಆಸ್ಪ್ರೇಲಿಯಾದ ಕ್ವಾಂಟಾಸ್ ಮತ್ತು ಏರ್ ಇಂಡಿಯಾ ವಿಮಾನಗಳು, ಬೆಂಗಳೂರಿನಿಂದ ಆಸ್ಪ್ರೇಲಿಯಾಕ್ಕೆ ತಡೆ ರಹಿತ ನೇರ ವಿಮಾನಯಾನವನ್ನು ಶೀಘ್ರವೇ ಆರಂಭಿಸಲಿವೆ. ಇದು ಆಸ್ಪ್ರೇಲಿಯಾ ಪ್ರವಾಸೋದ್ಯಮ ಬೆಳವಣಿಗೆಯ ದೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸಿದೆ.

ಆಸ್ಪ್ರೇಲಿಯಾದ ಕ್ವಾಂಟಾಸ್ ವಿಮಾನ ಸೆಪ್ಟೆಂಬರ್ 14, 2022ರಿಂದ ಬೆಂಗಳೂರಿಂದ ಸಿಡ್ನಿಗೆ ತಡೆರಹಿತ ಹಾರಾಟ ಮಾಡಲಿದೆ. ದೇಶಾದ್ಯಂತದ ಇತರ ಮಹಾನಗರಗಳಿಂದ ಆಸ್ಪ್ರೇಲಿಯಾಗೆ ತಡೆರಹಿತ ಹಾರಾಟಕ್ಕೆ ಕ್ವಾಂಟಾಸ್ ಯೋಜನೆ ರೂಪಿಸುತ್ತಿದೆ.

ಇದರ ಜೊತೆಗೆ ಆಸ್ಪ್ರೇಲಿಯಾದಲ್ಲಿ ರಜೆಯನ್ನು ಆನಂದಿಸಲು ಬಯಸುವವರಿಗೆ ಮತ್ತೊಂದು ಅವಕಾಶವನ್ನು ಆಸ್ಪ್ರೇಲಿಯಾ ಪ್ರವಾಸೋದ್ಯಮ ನೀಡಿದೆ. ಕೋವಿಡ್ ಅವಧಿಯಲ್ಲಿ ಆಸ್ಪ್ರೇಲಿಯಾ ಪ್ರವಾಸಕ್ಕೆ ವೀಸಾ ಪಡೆದಿದ್ದು, ಕೋವಿಡ್ ನಿರ್ಬಂಧದ ಕಾರಣ ಈ ಪ್ರವಾಸ ಸಾಧ್ಯವಾಗದೇ ಹೋಗಿದ್ದರೆ ನೀವೀಗ ಉಚಿತವಾಗಿ ವೀಸಾದ ಅವಧಿ ವಿಸ್ತರಣೆಗೆ ಅರ್ಜಿ ಸಲ್ಲಿಸಬಹುದು.

20 ಮಾಚ್ರ್ 2020ರಿಂದ 30 ಜೂನ್ 2022 ನಡುವೆ ವೀಸಾ ಅವಧಿ ಮುಗಿದಿರುವ, ಮುಕ್ತಾಯಗೊಳ್ಳುತ್ತಿರುವ ಪ್ರವಾಸಿಗರಿಗೆ ವೀಸಾ ಅರ್ಜಿಯ ಶುಲ್ಕ ಮನ್ನಾ ಮಾಡಲು ಆಸ್ಪ್ರೇಲಿಯಾ ಪ್ರವಾಸೋದ್ಯಮ ನಿರ್ಧರಿಸಿದೆ. ಹೀಗಾಗಿ ಆಸ್ಪ್ರೇಲಿಯಾದಲ್ಲಿ ರಜೆ ಕಳೆಯುವ ಕನಸನ್ನು ಈಗ ನನಸಾಗಿಸಿಕೊಳ್ಳಬಹುದು. ಇದಕ್ಕೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯದ ಅಮಲಿನಲ್ಲಿ ಮಾವನನ್ನು ಕೊಂದ ಅಳಿಯ