Select Your Language

Notifications

webdunia
webdunia
webdunia
webdunia

ಆಗ್ರಾ ಪ್ರವಾಸೋದ್ಯಮವು ಪುನಶ್ಚೇತನ

ಆಗ್ರಾ ಪ್ರವಾಸೋದ್ಯಮವು ಪುನಶ್ಚೇತನ
ನವದೆಹಲಿ , ಮಂಗಳವಾರ, 29 ಮಾರ್ಚ್ 2022 (15:05 IST)
ನವದೆಹಲಿ : ಕೋವಿಡ್ ಬಳಿಕ ಭಾರತ ಸರ್ಕಾರವು ಅಂತರರಾಷ್ಟ್ರೀಯ ಪ್ರಯಾಣವನ್ನು ಪುನರಾರಂಭಿಸಿದ ನಂತರ ಆಗ್ರಾ ಪ್ರವಾಸೋದ್ಯಮವು ಪುನಶ್ಚೇತನದ ಲಕ್ಷಣಗಳನ್ನು ತೋರಿಸುತ್ತಿದೆ.

ಕೋವಿಡ್ -19 ಪ್ರಪಂಚದಾದ್ಯಂತ ವಿನಾಶವನ್ನು ಉಂಟುಮಾಡಿದಂತೆ, ಸಾಂಕ್ರಾಮಿಕ ರೋಗದಿಂದಾಗಿ ವಿಧಿಸಲಾದ ನಿರ್ಬಂಧಗಳು ಆಗ್ರಾದ ಪ್ರವಾಸೋದ್ಯಮದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿತು.

ವಿಶ್ವ ಪ್ರಸಿದ್ಧ ತಾಜ್ ಮಹಲ್ನ್ನು ಹೊಂದಿರುವ ಉತ್ತರಪ್ರದೇಶದ ಆಗ್ರಾಕ್ಕೆ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಹೀಗಾಗಿ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಿದ್ದರಿಂದ ಈ ನಗರದ ಮೇಲೆ ಭಾರಿ ಪರಿಣಾಮ ಬೀರಿತು.

ಆದಾಗ್ಯೂ, ಮಾರ್ಚ್ 27 ರಿಂದ ಸರ್ಕಾರವು ಅಂತರರಾಷ್ಟ್ರೀಯ ಪ್ರಯಾಣವನ್ನು ಪುನರಾರಂಭಿಸಿದೆ. ಹೀಗಾಗಿ ಇಲ್ಲಿ ಪ್ರವಾಸೋದ್ಯಮವೂ ಮತ್ತೆ ಚಿಗುರಿದ ಲಕ್ಷಣಗಳನ್ನು ತೋರಿಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏರುಗತಿಯಲ್ಲಿ ಪೆಟ್ರೋಲ್, ಡೀಸೆಲ್ ದರ