Select Your Language

Notifications

webdunia
webdunia
webdunia
webdunia

ಯುದ್ಧ : ರಷ್ಯಾಗೆ ಆದೇಶ ನೀಡಿದ ಅಂತಾರಾಷ್ಟ್ರೀಯ ಕೋರ್ಟ್ !

ಯುದ್ಧ : ರಷ್ಯಾಗೆ ಆದೇಶ ನೀಡಿದ ಅಂತಾರಾಷ್ಟ್ರೀಯ ಕೋರ್ಟ್ !
ನವದೆಹಲಿ , ಗುರುವಾರ, 17 ಮಾರ್ಚ್ 2022 (10:13 IST)
ನೆದರ್ಲೆಂಡ್ಸ್ : ಮಹತ್ವದ ಆದೇಶದಲ್ಲಿ, ನೆದರ್ಲ್ಯಾಂಡ್ಸ್ನ ಹೇಗ್ನಲ್ಲಿರುವ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಬುಧವಾರ,  ಸಾರ್ವಭೌಮ ರಾಷ್ಟ್ರ ಉಕ್ರೇನ್  ಮೇಲಿನ ಆಕ್ರಮಣವನ್ನು ರಷ್ಯಾ  ತಕ್ಷಣವೇ ನಿಲ್ಲಿಸಬೇಕು ಎಂದು ಸೂಚನೆ ನೀಡಿದೆ.
 
" ಈ ಪ್ರಕರಣದಲ್ಲಿ ಇನ್ನೂ ಅಂತಿಮ ನಿರ್ಧಾರ ಬಾಕಿ ಉಳಿದಿದ್ದು, ರಷ್ಯಾದ ಒಕ್ಕೂಟವು, ಉಕ್ರೇನ್ ದೇಶದ ಮೇಲೆ ಆರಂಭಿಸಿರುವ ಸೇನಾ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು" ಎಂದು ಅದೇಶ ನೀಡಿದೆ.

"ರಷ್ಯಾದ ಒಕ್ಕೂಟವು ಮಿಲಿಟರಿ ಅಥವಾ ಅದು ನಿರ್ದೇಶಿಸುವ ಅಥವಾ ಬೆಂಬಲಿಸುವ ಯಾವುದೇ ಅನಿಯಮಿತ ಸಶಸ್ತ್ರ ಘಟಕಗಳು ಉಕ್ರೇನ್ ನೆಲದಲ್ಲಿ ಇರಬಾರದು ಎಂದು ಹೇಳಿದೆ.

ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯವಾಗಿರುವ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್ , ರಷ್ಯಾ ತನ್ನ ಆಕ್ರಮಣವನ್ನು ನಿಲ್ಲಿಸಲು ಉಕ್ರೇನ್ ಮಾಡಿದ ತುರ್ತು ಮನವಿಯ ಮೇಲೆ ಬುಧವಾರ ತೀರ್ಪು ನೀಡಿದೆ.

13-2 ಮತಗಳಿಂದ, ರಷ್ಯಾದ ಒಕ್ಕೂಟವು ಫೆಬ್ರವರಿ 24 ರಂದು ಪ್ರಾರಂಭವಾದ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ತೀರ್ಪು ಹೇಳಿದೆ. ವರದಿಗಳ ಪ್ರಕಾರ, ರಷ್ಯಾ ಮತ್ತು ಚೀನಾದ   ನ್ಯಾಯಾಧೀಶರು ಮಾತ್ರ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು.

"ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ರಷ್ಯಾ ವಿರುದ್ಧದ ಪ್ರಕರಣದಲ್ಲಿ ಉಕ್ರೇನ್ ಸಂಪೂರ್ಣ ಜಯ ಸಾಧಿಸಿದೆ. ಆಕ್ರಮಣವನ್ನು ತಕ್ಷಣವೇ ನಿಲ್ಲಿಸಲು ಐಸಿಜೆ ಆದೇಶ ನೀಡಿದೆ. ಆದೇಶವು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಬದ್ಧವಾಗಿದೆ. ರಷ್ಯಾ ಇದನ್ನು ಪಾಲಿಸಬೇಕು, ಆದೇಶವನ್ನು ನಿರ್ಲಕ್ಷ್ಯ ಮಾಡಿದಲ್ಲಿ, ರಷ್ಯಾ ವಿಶ್ವದಿಂದ ಮತ್ತಷ್ಟು ಪ್ರತ್ಯೇಕವಾಗಲಿದೆ ಎಂದು ಬರೆದುಕೊಂಡಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಲಾಡ್ಜ್‌ನಲ್ಲಿ ಪತ್ನಿಯ ಕಾಲು ಕತ್ತರಿಸಿದ ಪತಿ!