ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ವತಿಯಿಂದ ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಬೆಂಗಳೂರಿನ ಟೌನ್ ಹಾಲ್ ಬಳಿಯಿರುವ ನಯನ ರಂಗಮಂದಿರದಲ್ಲಿ ಇಂದು ನಡೆಯಿತು ..
ಕಾರ್ಯಕ್ರಮದಲ್ಲಿ ಹಲವಾರು ಯುವ ಬರಹ ಗಾರರು ತಮ್ಮ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು ..
ಇದರಲ್ಲಿ ವಿಶೇಷವಾಗಿ ದೃಶ್ಯ ಮಾಧ್ಯಮದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ
ಯುವ ಪತ್ರಕರ್ತೆ ಭರತನಾಟ್ಯ ಕಲಾವಿದೆಯಾಗಿರುವ ಯುವ ಲೇಖಕಿ ಗೀತಾಂಜಲಿ ಬಿ .ಎಂ. ರವರ "ಅವಳ ತಲ್ಲಣಗಳು" ಪುಸ್ತಕ ಬಿಡುಗಡೆಯಾಗಿದು ವಿಶೇಷವಾಗಿತ್ತು ...
ನೈಜ್ಯ ದೃಶ್ಯಗಳನ್ನು ಆಧರಿಸಿ ಬರೆದಿರುವ ಈ ಪುಸ್ತಕ ಭಾರೀ ಪ್ರಶಂಸೆ ವ್ಯಕ್ತವಾಗಿದ್ದಲ್ಲದೆ ಜೊತೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಯುವ ಲೇಖಕಿ ಕುಮಾರಿ ಗೀತಾಂಜಲಿ ಬಿಎಂ ರವರನ್ನು ಸನ್ಮಾನಿಸಿ ಗೌರವಿಸಲಾಯಿತು ,ಈ ಕುರಿತು ಮಾತಾಡಿದ ಯುವ ಲೇಖಕಿ ಕುಮಾರಿ ಗೀತಾಂಜಲಿ ಅವರು ಪ್ರತಿಯೊಂದು ಹೆಣ್ಣುಮಕ್ಕಳನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಪುಸ್ತಕದಲ್ಲಿ ಬರೆದಿರುವೆ ..
ಹಾಗೂ ಈ ಪುಸ್ತಕವನ್ನು ಪ್ರತಿಯೊಬ್ಬ ಹೆಣ್ಣು ಮಕ್ಕಳ ಕೈಯಲ್ಲಿ ಈ ಪುಸ್ತಕ ನೋಡುವುದೇ ನನ್ನ ಉದ್ದೇಶ , ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಇನ್ನಷ್ಟು ಪುಸ್ತಕಗಳನ್ನು ಬರೆಯುವುದಾಗಿ ತಿಳಿಸಿದರು