Select Your Language

Notifications

webdunia
webdunia
webdunia
webdunia

ಮೇಕೆದಾಟು ಪಾದಯಾತ್ರೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ

Corona
ಬೆಂಗಳೂರು , ಶುಕ್ರವಾರ, 7 ಜನವರಿ 2022 (14:04 IST)
ಮೇಕೆದಾಟು ಪಾದಯಾತ್ರೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಬೆಂಬಲ ಘೋಷಿಸಿದೆ. ಡಾ.ರಾಜ್‌ಕುಮಾರ್ ಕಾಲದಿಂದಲೂ ನೆಲ-ಜಲದ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ನೀಡುತ್ತಲೇ ಇದೆ.
ಮೇಕೆದಾಟು ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್.
 
ಇದು ಪಕ್ಷಾತೀತ ಹೋರಾಟವಾಗಿರುವುದರಿಂದ ಪಾದಯಾತ್ರೆಗೆ ಬೆಂಬಲ ನೀಡಬಹುದಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಾಣಿಜ್ಯ ಮಂಡಳಿಗೆ ಬಂದು ಬೆಂಬಲ ಕೋರಿದರು. ಇದರಲ್ಲಿ ಎಲ್ಲರೂ ಭಾಗವಹಿಸುತ್ತಿದ್ದಾರೆ. ನಮ್ಮ ಹನ್ನನ್ನು ಪ್ರತಿಪಾದಿಸಲು ನಾವು ಕೂಡ ಸೇರಿಕೊಳ್ಳುತ್ತೇವೆ.
 
ತಮಿಳುನಾಡಿಗೆ ನೂರು ಟಿಎಂಸಿ ನೀರು ಬಿಡಬೇಕು. ಆದರೆ, 400 ಟಿಎಂಸಿ ನೀರು ಹರಿಯುತ್ತಿದೆ. ಹೆಚ್ಚುವರಿಯಾಗಿ ಹರಿಯುತ್ತಿರುವ ನೀರನ್ನು ನಾವು ಉಪಯೋಗಿಸಲು ಹೋರಾಡಬೇಕಾಗಿದೆ. ಇದು ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಹೋರಾಟವಾಗಿದೆ. ಬೆಂಗಳೂರು ಬೃಹದಾಕಾರವಾಗಿ ಬೆಳೆಯುತ್ತಿದೆ. ಕುಡಿಯುವ ನೀರಿನ ಅಗತ್ಯತೆ ಹೆಚ್ಚುತ್ತಿದೆ. ಇದನ್ನು ನೀಗಿಸಲು ಮೇಕೆದಾಟು ಯೋಜನೆ ಅನುಕೂಲ ಯೋಜನೆ. ಕೊರೊನಾ ನಿಯಮಗಳು ಭೌತಿಕವಾಗಿ ನಾವೆಲ್ಲರೂ ಒಂದೇ ಬಾರಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಒಂದೊಂದು ದಿನ ಅವರ ಅನುಕೂಲಕ್ಕೆ ತಕ್ಕಂತೆ ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ಮೇಲೆ ಪೆಟ್ರೋಲ್ ಸುರಿದು ಕೊಂದ ತಾಯಿ