Publish Date: Tue, 18 Feb 2020 (09:46 IST)
Updated Date: Tue, 18 Feb 2020 (09:48 IST)
ನವದೆಹಲಿ: ನಿರ್ಭಯಾ ಗ್ಯಾಂಗ್ ರೇಪಿಸ್ಟ್ ಗಳ ಗಲ್ಲು ಶಿಕ್ಷೆಗೆ ಕೊನೆಗೂ ನವದೆಹಲಿಯ ಹೆಚ್ಚುವರಿ ಸೆಷನ್ಸ್ ಕೋರ್ಟ್ ಹೊಸ ಡೇಟ್ ಫಿಕ್ಸ್ ಮಾಡಿದೆ.
ಮಾರ್ಚ್ 3 ರಂದು ನಾಲ್ವರು ರೇಪಿಸ್ಟ್ ಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲು ಆದೇಶ ಹೊರಡಿಸಲಾಗಿದೆ. ಇದು ಮೂರನೇ ಬಾರಿಗೆ ಗಲ್ಲು ಶಿಕ್ಷೆಗೆ ದಿನಾಂಕ ನಿಗದಿಗೊಳಿಸಲಾಗುತ್ತಿದೆ. ಈ ಬಾರಿಯಾದರೂ ಪಾಪಿಗಳು ಗಲ್ಲಿಗೇರಿದರೆ ಸಾಕು ಎಂದು ನಿರ್ಭಯಾ ಸಂತ್ರಸ್ತೆಯ ತಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದರೆ ಅಪರಾಧಿ ಅಕ್ಷಯ್ ಕುಮಾರ್ ಪರ ವಕೀಲರು ಮತ್ತೊಮ್ಮೆ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವುದಾಗಿ ಹೇಳಿಕೊಂಡಿದ್ದಾರೆ. ಪ್ರತೀ ಬಾರಿಯೂ ಗಲ್ಲು ಶಿಕ್ಷೆ ನಿಗದಿಯಾದಾಗ ತಮಗಿರುವ ಕಾನೂನಾತ್ಮಕ ಅವಕಾಶಗಳನ್ನು ಬಳಸಿಕೊಂಡು ಈ ಅಪರಾಧಿಗಳು ಶಿಕ್ಷೆಯನ್ನು ಮುಂದೂಡುತ್ತಲೇ ಇದ್ದಾರೆ. ಹೀಗಾಗಿ ಈ ಬಾರಿ ಏನಾಗುವುದೋ ಕಾದು ನೋಡಬೇಕು.