Select Your Language

Notifications

webdunia
webdunia
webdunia
webdunia

ಪ್ರೀತಿಗೆ ಬಿದ್ದಿದ್ದ ತಂಗಿಯ ಖಾಸಗಿ ಅಂಗಾಂಗಕ್ಕೆ ಗುಂಡಿಕ್ಕಿ ಕೊಂದ ಅಣ್ಣ!

ಪ್ರೀತಿಗೆ ಬಿದ್ದಿದ್ದ ತಂಗಿಯ ಖಾಸಗಿ ಅಂಗಾಂಗಕ್ಕೆ ಗುಂಡಿಕ್ಕಿ ಕೊಂದ ಅಣ್ಣ!
ಮೀರತ್ , ಮಂಗಳವಾರ, 18 ಫೆಬ್ರವರಿ 2020 (09:16 IST)
ಮೀರತ್: ತಂಗಿಯ ಪ್ರೀತಿಯ ವಿಚಾರ ತಿಳಿದ ಅಣ್ಣ ಆಕೆಯ ಖಾಸಗಿ ಅಂಗಾಂಗಳಿಗೆ ಗುಂಡಿಕ್ಕಿ ಅಮಾನುಷವಾಗಿ ಕೊಲೆಗೈದ ಘಟನೆ ಮೀರತ್ ನಲ್ಲಿ ನಡೆದಿದೆ.


12 ನೇ  ತರಗತಿ ಓದುತ್ತಿದ್ದ ಟೀನಾ ಚೌಧರಿ ಎಂಬಾಕೆ ಮೃತಪಟ್ಟವಳು. ಈಕೆ ಯುವಕನೊಬ್ಬನ ಜತೆ ಪ್ರೀತಿಯಲ್ಲಿ ಬಿದ್ದಿದ್ದಳು. ಆದರೆ ಈ ಸಂಬಂಧ ಮನೆಯವರಿಗೆ ಇಷ್ಟವಿರಲಿಲ್ಲ. ಆದರೆ ಮನೆಯವರ ಮಾತಿಗೆ ಸೊಪ್ಪು ಹಾಕದ ಟೀನಾ ಮೇಲೆ ಸಿಟ್ಟಿಗೆದ್ದ ಸಹೋದರ ಆಕೆಯ ತೊಡೆ, ಖಾಸಗಿ ಅಂಗಾಂಗಳು ಮತ್ತು ಬೆನ್ನಿನ ಭಾಗಕ್ಕೆ ಗುಂಡಿಕ್ಕಿ ಕೊಲೆಗೈದಿದ್ದಾನೆ ಎನ್ನಲಾಗಿದೆ. ಆಕೆಯ ಪ್ರಿಯಕರನ ಮುಂದೆಯೇ ಈ ಕೃತ್ಯವೆಸಗಲಾಗಿದೆ ಎನ್ನಲಾಗಿದೆ.

ಬಳಿಕ ಮನೆಯವರು ಸುಳ್ಳು ಕತೆ ಸೃಷ್ಟಿಸಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದಾರೆ. ಈ ಸಂಬಂಧ ಪೊಲೀಸರು ಮರ್ಯಾದಾ ಹತ್ಯೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಭಯಾ ಪ್ರಕರಣದ ದೋಷಿಗಳಿಗೆ ಮಾರ್ಚ್ 3 ರಂದು ಗಲ್ಲು ಶಿಕ್ಷೆ