ವಿಮೆ ಹಣ ಪಡೆಯಲು ಮಾವನನ್ನೇ ಕೊಂದ ಭೂಪ

ಭಾನುವಾರ, 16 ಫೆಬ್ರವರಿ 2020 (09:26 IST)
ಹೈದರಾಬಾದ್: 50 ಲಕ್ಷ ವಿಮೆ ಹಣ ಪಡೆಯಲು ವ್ಯಕ್ತಿಯೊಬ್ಬ ತನ್ನ ಗಾಡ್ ಫಾದರ್ ಆಗಿದ್ದ ಮಾವನನ್ನೇ ಕೊಂದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.


ಈ ಸಂಬಂಧ ರಮೇಶ್ ಮತ್ತು ಆತನ ಸಹಾಯಕ ಸೋಭನ್ ಬಾಬು ಎಂತಾನನ್ನು ಪೊಲೀಸರು ಬಂಧಿಸಿದ್ದಾರೆ. ರಮೇಶ್ ತನ್ನ ಮಾವನ ಸಹಾಯದಿಂದಲೇ ಟ್ರಕ್ ಖರೀದಿ ಮಾಡಿ ಜೀವನೋಪಾಯ ಕಂಡುಕೊಂಡಿದ್ದ.

ಆದರೆ ತನ್ನ ಜೀವನಕ್ಕೆ ದಾರಿ ಮಾಡಿಕೊಟ್ಟ ಮಾವನಿಗೆ ಪತ್ನಿ, ಮಕ್ಕಳು ಇರಲಿಲ್ಲ. ಆದರೆ ಆತನ ಹೆಸರಿನಲ್ಲಿ 50 ಲಕ್ಷ ರೂ.ಗಳ ಭಾರೀ ವಿಮೆ ಮೊತ್ತ ಇರುವುದು ಆತನಿಗೆ ಗೊತ್ತಾಗಿತ್ತು. ಹೀಗಾಗಿ ಆ ಹಣ ತನಗೇ ದೊರಕಬಹುದೆಂಬ ದುರಾಸೆಯಿಂದ ಟ್ರಕ್ ಹರಿಸಿ ಮಾವನನ್ನು ಕೊಲೆ ಮಾಡಿದ್ದಾನೆ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಭಾರತೀಯ ಸೇನೆಯಲ್ಲಿ ಉದ್ಯೋಗ ಬೇಕೇ? ಹಾಗಿದ್ದರೆ ಇಂದೇ ಅರ್ಜಿ ಸಲ್ಲಿಸಿ